
ಆಧಾರ್ ಕಾರ್ಡ್ ಅನ್ನು ಪಾನ್ ಕಾರ್ಡ್ನೊಂದಿಗೆ ಲಿಂಕ್ ಮಾಡುವುದು ಅನೇಕರಿಗೆ ಬೇಸರದ ಕೆಲಸ, ಹಲವರು ಲಿಂಕ್ ಮಾಡಲು ಪರದಾಡಿ ಸೋತು ಸುಮ್ಮನಾಗಿದ್ದಾರೆ. ಈ ನಡುವೆ ಎರಡನ್ನೂ ಲಿಂಕ್ ಮಾಡುವ ಗಡುವುಗಳನ್ನು ಮುಂದೂಡುತ್ತಲೇ ಬರಲಾಗಿರುವ ನಡುವೆ ಟ್ವಿಟರ್ ಬಳಕೆದಾರರೊಬ್ಬರು ತಮಾಷೆಯ ಟ್ವೀಟ್ ಹಂಚಿಕೊಂಡಿದ್ದಾರೆ, ಅದು ನಗು ತರಿಸುತ್ತದೆ.
ಅಥರ್ವ ಗುಪ್ತೆ ಅವರು ಟ್ವೀಟ್ನಲ್ಲಿ ಆಧಾರ್ ಕಾರ್ಡನ್ನು ಪಾನ್ ಕಾರ್ಡ್ನೊಂದಿಗೆ ಲಿಂಕ್ ಮಾಡುವ ಮೋಜಿನ ದಾರಿ ಹಂಚಿಕೊಂಡಿದ್ದರೆ. ಅವರು ಹಂಚಿಕೊಂಡ ಫೋಟೋದಲ್ಲಿ ಸುಲಭವಾದ ಮಾರ್ಗವನ್ನು ತೋರಿಸುತ್ತದೆ. ಆದರೆ, ಆ ಫೋಟೋ ಚಿತ್ರ ಕೇವಲ ಹಾಸ್ಯದ ಉದ್ದೇಶಕ್ಕಾಗಿ ಮಾತ್ರ.
ಅವರು ಮಾಡಿದ್ದೇನು ಗೊತ್ತಾ? ಸ್ಟೌವ್ ಮೇಲೆ ಅಡುಗೆ ಮಾಡುವ ಪ್ಯಾನ್ ಇಟ್ಟು ಅದರ ಮೇಲೆ ಆಧಾರ್ ಕಾರ್ಡ್ ಇಟ್ಟು, ಟೇಪ್ ಹಚ್ಚಿದ್ದಾರೆ. ಯಾರೇ ನೋಡಿದರು ನಗು ತರಿಸುತ್ತದೆ.
ಅವರ ಪೋಸ್ಟ್ ವೈರಲ್ ಆಗಿದ್ದು, 50 ಸಾವಿರಕ್ಕೂ ಹೆಚ್ಚು ಲೈಕ್ ಬಂದಿದೆ. ಅನೇಕರು ಹಾಸ್ಯಭರಿತ ಕಾಮೆಂಟ್ ಮಾಡಿ ಖುಷಿಹಂಚಿಕೊಂಡಿದ್ದಾರೆ. “ಸೃಜನಶೀಲತೆಗೆ 100 ಅಂಕಗಳು” ಎಂದು ಒಬ್ಬರು ಬರೆದಿದ್ದಾರೆ.
ಸೆಂಟ್ರಲ್ ಬೋಡ್ ಆಫ್ ಡೈರೆಕ್ಟ್ ಟ್ಯಾಕ್ಸ್ ಪ್ರಕಾರ, ಜೂನ್ 30, 2022 ಅಥವಾ ಮೊದಲು ಪ್ಯಾನ್ ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡಿದರೆ ರೂ.500 ದಂಡವನ್ನು ಪಾವತಿಸಬೇಕಾಗುತ್ತದೆ. ಜೂನ್ 30ರೊಳಗೆ ಲಿಂಕ್ ಮಾಡುವುದನ್ನು ತಪ್ಪಿಸಿಕೊಂಡರೆ, ರೂ. 1000 ದಂಡವನ್ನು ಪಾವತಿಸಬೇಕಾಗುತ್ತದೆ. ಈ ನಡುವೆಯೂ ಗಡುವನ್ನು ಮಾರ್ಚ್ 31, 2023 ರವರೆಗೆ ವಿಸ್ತರಿಸಿರುವುದರಿಂದ ಸ್ವಲ್ಪ ಸಮಯಕಾಶ ಸಿಕ್ಕಿದೆ.