`ನಾನು ಇನ್ನೊಂದು ಕಂಪನಿಗೆ ಸಂದರ್ಶನಕ್ಕೆ ಹೋಗಬೇಕಾಗಿರುವುದರಿಂದ ಇಂದು ನನಗೆ ರಜೆಯನ್ನು ಮಂಜೂರು ಮಾಡಬೇಕಾಗಿ ವಿನಂತಿ’. ಹೀಗೆ ರಜೆ ಕೇಳುವುದಿರಲಿ, ಇನ್ನೊಂದು ಕಂಪನಿಗೆ ಇಂಟರ್ ವ್ಯೂಗೆ ಹೋಗುತ್ತಿದ್ದಾರೆಂದು ಗೊತ್ತಾದ ತಕ್ಷಣ ಅಂತಹ ಉದ್ಯೋಗಿಯನ್ನು ತಕ್ಷಣವೇ ಕಂಪನಿಯವರು ಕೆಲಸದಿಂದಲೇ ತೆಗೆದುಹಾಕುತ್ತಾರೆ ಅಥವಾ ಮತ್ತೊಂದು ಕಡೆಗೆ ವರ್ಗಾವಣೆ ಮಾಡುತ್ತಾರೆ.
ಆದರೆ, ಇಲ್ಲೊಬ್ಬ ಭೂಪ ತನ್ನ ಬಾಸ್ ಗೆ ಇಮೇಲ್ ಮಾಡಿ ಸಂದರ್ಶನಕ್ಕೆ ಹೋಗಬೇಕಿರುವುದರಿಂದ ರಜೆ ಬೇಕೆಂದು ಅರ್ಜಿ ಗುಜರಾಯಿಸಿದ್ದಾನೆ. ಈ ರಜೆಯ ಅರ್ಜಿಯು ಟ್ವಿಟರ್ ನಲ್ಲಿ ಸಾಹಿಲ್ ಎಂಬುವರು ಹಂಚಿಕೊಂಡಿದ್ದು, ಸಾಕಷ್ಟು ನೆಟ್ಟಿಗರನ್ನು ನಿಬ್ಬೆರಗಾಗಿಸಿದೆ.
ನಿರ್ವಸತಿಗ ಬಾಲಕನೆಡೆಗೆ ಮಹಿಳೆ ತೋರಿದ ʼಹೃದಯವಂತಿಕೆʼ ವಿಡಿಯೋ ವೈರಲ್
ಉದ್ಯೋಗಿಯು ರಜೆಯ ಅರ್ಜಿಯ ಜೊತೆಗೆ `ನನ್ನ ಜೂನಿಯರ್ ಗಳು ತುಂಬಾ ಸ್ವೀಟ್ ಆಗಿದ್ದಾರೆ. ನಾನು ಸಂದರ್ಶನಕ್ಕೆ ಹೋಗಲು ರಜೆಯನ್ನು ಹಾಕಿ ಎಂದು ಸಲಹೆ ಮಾಡಿದ್ದಾರೆ’ ಎಂದು ಹೇಳಿಕೊಂಡಿದ್ದಾನೆ.
ಇದು ನೆಟ್ಟಿಗರನ್ನು ಆಶ್ಚರ್ಯಚಕಿತರನ್ನಾಗುವಂತೆ ಮಾಡಿದೆಯಲ್ಲದೇ, ಸುಳ್ಳು ಹೇಳಿ ರಜೆ ತೆಗೆದುಕೊಳ್ಳುವವರ ಮಧ್ಯೆ, ಈ ಉದ್ಯೋಗಿ ಸತ್ಯವನ್ನು ಹೇಳಿದ್ದಾನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.