ಗಿನ್ನೆಸ್ ವರ್ಲ್ಡ್ ರೆಕಾರ್ಡ್ನಲ್ಲಿ ಹೆಸರು ನಮೂದಾಗುವುದು ಎಂದರೆ ಸುಲಭದ ಮಾತಲ್ಲ. ಅದರಲ್ಲಿ ಮಾಡುವ ದಾಖಲೆಗಳು ಒಂದೊಂದೂ ಒಂದೊಂದು ರೀತಿಯಲ್ಲಿ ವಿಸ್ಮಯ ಮೂಡಿಸುತ್ತದೆ. ಅಂಥದ್ದರಲ್ಲಿ ಒಂದು ಡೆನ್ಮಾರ್ಕ್‌ನ ಲಾರ್ಸ್ ಆಂಡರ್ಸನ್ ಬಿಲ್ಲುಗಾರನ ಕೌಶಲ.
ಬಿಲ್ಲುಗಾರಿಕೆ ಕೌಶಲನ್ನು ಪ್ರದರ್ಶಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಲಾರ್ಸ್ ಆಂಡರ್ಸನ್ ಅವರು ಒಂದರ ನಂತರ ಒಂದರಂತೆ ಬಾಣ ಬಿಡುತ್ತಾರೆ. ದೂರದಲ್ಲಿ ಇರುವ ಕೀಹೋಲ್ ಅವರ ಬಾಣದ ಗುರಿ. ಅನತಿ ದೂರದಲ್ಲಿ ನಿಂತು ಬಾಣವನ್ನು ಕೀ ಹೋಲ್ಗೆ ಹಾಕುತ್ತಾರೆ. ಒಂದೇ ಒಂದು ಸೂಜಿಯಷ್ಟು ಗುರಿ ತಪ್ಪಿದರೂ ಬಾಣ ಪಕ್ಕಕ್ಕೆ ಹೋಗುತ್ತದೆ.
ಆದರೆ ಇವರು ಆ ಚಿಕ್ಕ ಹೋಲ್ನಿಂದ ಬಾಣ ಬಿಡುತ್ತಾರೆ. ಒಟ್ಟು ಏಳು ಬಾಣಗಳನ್ನು ಒಂದಾದ ಮೇಲೊಂದರಂತೆ ಗುರಿ ತಪ್ಪದೇ ಬಿಡುವ ಮೂಲಕ ವಿಶ್ವ ದಾಖಲೆ ಬರೆದಿದ್ದಾರೆ. ಅದರ ವಿಡಿಯೋ ವೈರಲ್ ಆಗಿದೆ. ಕೆಲವೇ ಗಂಟೆಗಳಲ್ಲಿ ಈ ವಿಡಿಯೋ 33 ಸಾವಿರಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದ್ದು, ಇವರ ಕೌಶಲ ನೋಡುಗರನ್ನು ನಿಬ್ಬೆರಗಾಗಿಸುತ್ತದೆ.