ಅಪಘಾತಗಳೇ ಹಾಗೆ. ಮುನ್ಸೂಚನೆ ನೀಡದೇ ನಡೆದು ಬಿಡುತ್ತವೆ. ಜೀವ ಗಟ್ಟಿಯಿದ್ದವನು ಕೂದಲೆಳೆ ಅಂತರದಿಂದ ಪಾರಾದರೆ, ಸಾಯುವ ವೇಳೆ ಬಂದರೆ ಕಾರಣವೇ ಬೇಕಿರುವುದಿಲ್ಲ. ಈಗ ವೈರಲ್ ಆಗಿರುವ ವಿಡಿಯೋ ಒಂದರಲ್ಲಿ ಪುಟ್ಟ ಮಗು ಹೇಗೆ ಜೀವ ಉಳಿಸಿಕೊಂಡಿತು ಎಂದು ತೋರಿಸುತ್ತದೆ.
ಈ ವಿಡಿಯೋದಲ್ಲಿ ಕಿರಿದಾದ ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ವ್ಯಕ್ತಿಯೊಬ್ಬ ನಿಧಾನವಾಗಿ ದಾಟುತ್ತಿರುವುದನ್ನು ನೋಡಬಹುದು. ಇದನ್ನು ನೋಡುತ್ತಿದ್ದರೆ, ಈತನಿಗೇ ಏನೋ ಅಪಾಯ ಆಗಲಿದೆ ಎಂದು ಎನ್ನಿಸುವುದು ಉಂಟು. ಆದರೆ ಅಸಲಿಗೆ ಆಗಿದ್ದೇ ಬೇರೆ.
ಅತ್ತ ಕಡೆಯಿಂದ ದಂಪತಿ ಬೈಕ್ನಲ್ಲಿ ವೇಗವಾಗಿ ಬರುತ್ತಿದ್ದಾರೆ. ಆಗ ಪುಟ್ಟ ಮಗುವೊಂದು ಅಚಾನಕ್ ಆಗಿ ರಸ್ತೆಯ ಮಧ್ಯೆ ಬಂದುಬಿಡುತ್ತದೆ.
ಬೈಕ್ ಇರುವ ವೇಗದಲ್ಲಿ ಖಂಡಿತವಾಗಿಯೂ ಆ ಮಗು ಬದುಕಲು ಸಾಧ್ಯವಿರಲಿಲ್ಲ. ಆದರೆ ರಸ್ತೆಯನ್ನು ದಾಟುತ್ತಿರುವ ವ್ಯಕ್ತಿ ಸಿನಿಮೀಯ ರೀತಿಯಲ್ಲಿ ಬಂದು ಆ ಮಗುವನ್ನು ಎತ್ತಿ ತಿರುಗಿಸುತ್ತಾನೆ. ಮಗು ಬಚಾವಾಗುತ್ತದೆ. ದಂಪತಿ ಬೈಕ್ನಿಂದ ಆಯತಪ್ಪಿ ಬೀಳುತ್ತಾರೆ.
ಕೂದಲೆಳೆ ಅಂತರದಿಂದ ಮಗು ಪಾರಾಗಿದ್ದು, ಆ ವ್ಯಕ್ತಿ ದೇವರ ರೂಪದಲ್ಲಿ ಮಗುವಿನ ರಕ್ಷಣೆ ಮಾಡಿರುವುದನ್ನು ವಿಡಿಯೋದಲ್ಲಿ ನೋಡಬಹುದು.
https://twitter.com/ShockingClip/status/1626107406714372096?ref_src=twsrc%5Etfw%7Ctwcamp%5Etweetembed%7Ctwterm%5E1626107406714372096%7Ctwgr%5Ee26a8139ce17533e5aa9c9b6cfa8f868fb9fd109%7Ctwcon%5Es1_&ref_url=https%3A%2F%2Fwww.india.com%2Fviral%2Fman-saves-toddler-certain-mishap-accident-lightening-fast-reflexes-watch-viral-video-5906571%2F