ಮೊಸಳೆ ಹೆಸರು ಕೇಳಿದರೇ ಜನರಿಗೆ ಭಯ ಹುಟ್ಟುತ್ತದೆ. ಅಂಥದ್ದರಲ್ಲಿ ಮೊಸಳೆಗಳನ್ನೇ ಪಳಗಿಸುವ ಪ್ರಳಯಾಂತಕರ ವಿಡಿಯೋಗಳನ್ನು ಬಹಳಷ್ಟು ನೋಡಿದ್ದೇವೆ.
ಇಂಥದ್ದೇ ಒಬ್ಬ ಪ್ರಳಯಾಂತಕ ವ್ಯಕ್ತಿ ಎಮ್ಮೆ ಮೇಲೆ ಕುಳಿತಷ್ಟೇ ಸರಾಗವಾಗಿ ಮೊಸಳೆ ಮೇಲೆ ಕುಳಿತುಕೊಡು ಅದಕ್ಕೆ ಮಾಂಸದ ತುಂಡನ್ನು ಕೊಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಮೊಸಳೆಗೆ ಮಾಂಸದ ತುಂಡು ತೋರಿಸಿ ಆಟವಾಡಿಸುತ್ತಿರುವ ಈತನಿಗಿಲ್ಲದ ಭಯ ಈತನ ಚೇಷ್ಟೆಯನ್ನು ಸಾಮಾಜಿಕ ಜಾಲತಾಣದಲ್ಲಿ ಕಂಡ ನೆಟ್ಟಿಗರಿಗೆ ಆಗಿದೆ. ಒಂದು ವೇಳೆ ಮೊಸಳೆ ಮಾಂಸದ ತುಂಡನ್ನು ಹಿಡಿಯಲು ಹೋಗಿ ಆತನ ಕೈ ಕಚ್ಚಿದರೆ ಏನು ಕಥೆ ಎಂದು ನೆಟ್ಟಿಗರು ಕಳಕಳಿ ವ್ಯಕ್ತಪಡಿಸಿದ್ದಾರೆ.
https://youtu.be/j5PnrHNCV0Q