alex Certify ಲೈಬ್ರರಿಯಿಂದ ಅಜ್ಜ ತಂದ ಪುಸ್ತಕವನ್ನು 84 ವರ್ಷದ ಬಳಿಕ ದಂಡದ ಸಹಿತ ವಾಪಸ್​ ನೀಡಿದ ಮೊಮ್ಮಗ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೈಬ್ರರಿಯಿಂದ ಅಜ್ಜ ತಂದ ಪುಸ್ತಕವನ್ನು 84 ವರ್ಷದ ಬಳಿಕ ದಂಡದ ಸಹಿತ ವಾಪಸ್​ ನೀಡಿದ ಮೊಮ್ಮಗ….!

ಅಜ್ಜ ಲೈಬ್ರರಿಯಿಂದ ತಂದ ಪುಸ್ತಕವನ್ನು ಮೊಮ್ಮಗ 84 ವರ್ಷದ ಬಳಿಕ ವಾಪಸ್ ನೀಡಿದ ಘಟನೆ ನಡೆದಿದೆ. 1938ರಲ್ಲಿ ಕ್ಯಾಪ್ಟನ್ ವಿಲಿಯಂ ಹ್ಯಾರಿಸನ್ ಅವರು ಲೇಖಕ ರಿಚರ್ಡ್ ಜೆಫರೀಸ್ ಅವರ ʼರೆಡಿ ಡೀರ್ʼ ಎನ್ನುವ ಪುಸ್ತಕವನ್ನು ಅರ್ಲ್ಸ್‌ ಡನ್ ಲೈಬ್ರರಿಯಿಂದ ಪಡೆದುಕೊಂಡಿದ್ದರು. 1957ರಲ್ಲಿ ವಿಲಿಯಂ ಹ್ಯಾರಿಸನ್ ತೀರಿ ಹೋಗಿದ್ದರು. ಅವರು ಪಡೆದುಕೊಂಡ ಪುಸ್ತಕಗಳು ಕಪಾಟಿನಲ್ಲಿ ಉಳಿದುಕೊಂಡಿದ್ದವು.

ವಿಲಿಯಂ ಹ್ಯಾರಿಸನ್ ಅವರ ಮೊಮ್ಮಗ ಪ್ಯಾಡಿ ರಿಯೊರ್ಡಾನ್ ಇತ್ತೀಚೆಗೆ ಅಮ್ಮನ ಮನೆಯನ್ನು ಸ್ವಚ್ಛ ಮಾಡುವಾಗ ಈ ಪುಸ್ತಕ ಕಂಡಿದೆ. ಅದರಲ್ಲಿ ಆ ಪುಸ್ತಕವನ್ನು ಅದೇ ವರ್ಷದ ( 1938) ಅಕ್ಟೋಬರ್ 11 ರೊಳಗೆ ಅದನ್ನು ಹಿಂತಿರುಗಿಸಬಹುದೆಂದು ಬರೆಯಲಾಗಿತ್ತು.

ಅದನ್ನು ನೋಡಿದ ಪ್ಯಾಡಿ ಅವರು, ಅರ್ಲ್ಸ್‌ಡನ್ ಲೈಬ್ರರಿಗೆ ಹೋಗಿ ಪುಸ್ತಕವನ್ನು ಹೋಗಿ ವಾಪಸ್ ಕೊಟ್ಟಿದ್ದಾರೆ. ಇದರೊಂದಿಗೆ ಲೈಬ್ರರಿಗೆ ದೇಣಿಗೆಯನ್ನೂ ನೀಡಿದ್ದಾರೆ. ಈ ದೇಣಿಗೆಯಲ್ಲಿ ಅಂದಿನಿಂದ ಪುಸ್ತಕಕ್ಕೆ ಬಿದ್ದ ದಂಡವೂ ಸೇರಿದೆ! ಪುಸ್ತಕ ವಾಪಸ್ ಕೊಟ್ಟ ಬಳಿಕ ಅರ್ಲ್ಸ್‌ ಡನ್ ಲೈಬ್ರರಿ ಈ ಘಟನೆಯ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...