alex Certify ಟ್ರೇನ್ ಮಿಸ್ಸಾಗೋ ಭಯಕ್ಕೆ ಒಂದು ಗಂಟೆ ಮುಂಚೆಯೇ ರೈಲ್ವೆ ಸ್ಟೇಷನ್​ಗೆ ಬಂದ ಭೂಪ….! ಅಲ್ಲಿ ಮಾಡಿದ್ದೇನು ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರೇನ್ ಮಿಸ್ಸಾಗೋ ಭಯಕ್ಕೆ ಒಂದು ಗಂಟೆ ಮುಂಚೆಯೇ ರೈಲ್ವೆ ಸ್ಟೇಷನ್​ಗೆ ಬಂದ ಭೂಪ….! ಅಲ್ಲಿ ಮಾಡಿದ್ದೇನು ಗೊತ್ತಾ..?

ರೈಲ್ವೆ……ಭಾರತದಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿರೋ ಸಾರಿಗೆ. ಶ್ರೀಮಂತರಾಗಲಿ, ಬಡವರಾಗಲಿ ದೂರದೂರಿಗೆ ಪ್ರಯಾಣಿಸಲು ರೈಲ್ವೆಯನ್ನೇ ಬಳಸೋದು ಸೂಕ್ತ ಅಂತ ಹೇಳುತ್ತಾರೆ. ಇದು ಅಗ್ಗದ ಜೊತೆಗೆ ಆರಾಮದಾಯಕ ಕೂಡಾ. ಆದರೆ ರೈಲ್ವೆನಲ್ಲಿ ಪ್ರಯಾಣಿಸೋವಾಗ ಎದುರಾಗೋ ಒಂದು ಸಮಸ್ಯೆ ಏನಂದ್ರೆ, ರೈಲು ಹೊರಡೋ ಸಮಯಕ್ಕೆ ಸರಿಯಾಗಿ ರೈಲ್ವೆ ಸ್ಟೇಷನ್​ಗೆ ತಲುಪಲಿಲ್ಲ ಅಂದ್ರೆ ರೈಲು ಮಿಸ್ಸಾಗೋದು ಗ್ಯಾರಂಟಿ.

ಇಂಥಾ ಅನುಭವ ತುಂಬಾ ಜನರಿಗೆ ಆಗಿದೆ. ಇದೇ ಕಾರಣಕ್ಕಾಗಿ ತುಂಬಾ ಜನರು ರೈಲ್ವೆ ಸ್ಟೇಷನ್​ಗೆ ರೈಲು ಹೊರಡೋ ಸಮಯಕ್ಕಿಂತ ಮುಂಚೆಯೇ ಸ್ಟೇಷನ್​ಗೆ ಬಂದು ಕಾಯ್ತಿರ್ತಾರೆ. ಇದೇ ರೀತಿಯ ವ್ಯಕ್ತಿಯೊಬ್ಬರು, ತಾವು ಪ್ರಯಾಣಿಸಬೇಕಾದ ರೈಲು ಪ್ಲಾಟ್​ಫಾರ್ಮ್​ಗೆ ಬರುವುದಕ್ಕಿಂತ, ಒಂದು ಗಂಟೆ ಮುಂಚೆಯೇ ಕಾಯ್ತಾ ನಿಂತಿದ್ದಾರೆ. ಆ ಸಮಯದಲ್ಲಿ ತಮಗಾದ ಅನುಭವನ್ನ ಬ್ರೇನ್ ನಿಬ್ಬರ್ ಅನ್ನೊ ತಮ್ಮ ಟ್ವೀಟರ್​ ಅಕೌಂಟ್ನ್​​ಹಂಚಿಕೊಂಡಿದ್ದಾರೆ. ಅವರ ಈ ಪೋಸ್ಟ್​ಗೆ ತುಂಬಾ ಫನ್ನಿ ಫನ್ನಿ ಆಗಿರೋ ರಿಪ್ಲೈಗಳು ಕೂಡಾ ಬರ್ತಿವೆ.

ಲಾಡ್ಜ್ ನಲ್ಲಿ ವೈದ್ಯನ ಹನಿಟ್ರ್ಯಾಪ್: ಸ್ನೇಹಿತ ಸೇರಿ ಮೂವರು ಸುಲಿಗೆಕೋರರು ಅರೆಸ್ಟ್

ರೈಲ್ವೆನಲ್ಲಿ ಪ್ರಯಾಣಿಸಬೇಕಂದ್ರೆ ಮೊದಲೇ ಎಲ್ಲ ಪ್ಲಾನ್ ಮಾಡಿರಬೇಕು. ಸೀಟ್​ನ್ನ ಕಾಯ್ದಿರಿಸಲೇ ಬೇಕು ಅದಕ್ಕೂ ಮುಖ್ಯವಾಗಿ ರೈಲ್ವೆ ಪ್ಲಾಟ್​ಫಾರ್ಮಗೆ ಬರುವುದಕ್ಕಿಂತ ಮುಂಚೆಯೇ ಹೋಗಿ ರೈಲಿಗಾಗಿ ಕಾಯಬೇಕು. ನೀವು ಒಬ್ಬರೇ ಆದರೆ ಪರವಾಗಿಲ್ಲ. ಕುಟುಂಬದವರು, ವಯಸ್ಸಾದವರು, ಮಕ್ಕಳು ಜೊತೆಯಲ್ಲಿದ್ದರಂತೂ ರೈಲು ಹತ್ತುವುದೇ ಸಾಹಸದ ಕೆಲಸವಾಗಿರುತ್ತೆ. ಇದೇ ಕಾರಣಕ್ಕೆ ಒಂದು ಗಂಟೆ ಮುಂಚೆಯೇ ಬಂದು ಜನರು ರೈಲಿಗಾಗಿ ಕಾಯುವುದು ಸಹಜ. ಪ್ರತಿಯೊಬ್ಬರೂ ಜೀವನದಲ್ಲಿ ಇಂತಹ ಒಂದು ಅನುಭವ ಹೊಂದಿರುತ್ತಾರೆ. ಇದನ್ನ ನೆನಪಿಸೋವಂತಹ ಟ್ವಿಟರ್ ಪೋಸ್ಟ್ ಒಂದು ನೋಡಬಹುದಾಗಿದೆ. ಈ ಫೋಟೋಗೆ ಇವರು `ನಾವು ಹೊರಡಬೇಕಾಗಿದ್ದ 8.40ರ ರೈಲಿಗಾಗಿ 7.15ಕ್ಕೆನೇ ಬಂದು ಕಾಯ್ತಾ ಇದ್ದೇವು. ನೀವು ನಿಮ್ಮ ಕುಟುಂಬದವರು ಎಷ್ಟು ಗಂಟೆ ಮುಂಚೆ ಬಂದು ರೈಲಿಗಾಗಿ ಕಾಯ್ತಿರಾ ಅನ್ನೊ ಕಾಪ್ಷನ್ ಕೊಟ್ಟಿದ್ಧಾರೆ.

ಈ ಟ್ವೀಟ್ ಪೋಸ್ಟ್​ಗೆ ಒಬ್ಬಬ್ಬರದ್ದು ಒಂದೊಂದು ರೀತಿಯ ರಿಯಾಕ್ಷನ್ ಆಗಿದೆ. ಕೆಲವರು ತಮ್ಮ ಬಾಲ್ಯದ ದಿನದಲ್ಲಿ ಹೇಗೆ ಹೊರಡುತ್ತಿರೊ ರೈಲಿಗಾಗಿ ಓಡೋಡಿ ಬರ್ತಿದ್ದರು ಅನ್ನೊ ಅನುಭವನ್ನ ಹಂಚಿಕೊಂಡಿದ್ದಾರೆ. ಕೆಲವರು ತಮ್ಮ ಪಾಲಕರು ರೈಲಿಗಾಗಿ ಒಂದಿಡಿ ದಿನ ಹೇಗೆಲ್ಲ ದೌಡಾಯಿಸುತ್ತಿದ್ದರು ಅನ್ನೋ ಕಾಮೆಂಟ್ ಕೊಟ್ಟಿದ್ದಾರೆ. ಇವೆಲ್ಲ ಓದೋದಕ್ಕೆ ಫನ್ನಿ ಅನಿಸಿದರೂ ಸತ್ಯವಾಗಿರೋ ವಿಚಾರವಂತೂ ಸತ್ಯ.

https://twitter.com/Muggermuch_/status/1528413822943633409?ref_src=twsrc%5Etfw%7Ctwcamp%5Etweetembed%7Ctwterm%5E1528413822943633409%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fman-reaches-railway-station-an-hour-before-train-s-arrival-desi-twitter-finds-it-too-relatable-1954065-2022-05-25

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...