alex Certify ಮತ್ತೊಂದು ಹೇಯ ಕೃತ್ಯ: ಬೀದಿ ನಾಯಿಯನ್ನೂ ಬಿಡಲಿಲ್ಲ ಕಾಮುಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಂದು ಹೇಯ ಕೃತ್ಯ: ಬೀದಿ ನಾಯಿಯನ್ನೂ ಬಿಡಲಿಲ್ಲ ಕಾಮುಕ…!

ಪ್ರಾಣಿಗಳ ಮೇಲೆ ಮಾನವ ಅತ್ಯಾಚಾರ ನಡೆಸಿರುವ ಹಲವು ಘಟನೆಗಳು ಈಗಾಗಲೇ ಬೆಳಕಿಗೆ ಬಂದಿದೆ. ಇದೀಗ ಇದಕ್ಕೆ ಮತ್ತೊಂದು ಹೇಯ ಕೃತ್ಯ ಸೇರ್ಪಡೆಯಾಗಿದ್ದು, ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಬೀದಿ ನಾಯಿ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿದ್ದಾನೆ.

ಈ ನೀಚ ಕೃತ್ಯವೆಸಗಿದ ಕಾಮುಕನನ್ನು ಪ್ರವೀಣ್ ತಾಂಬೆ ಎಂದು ಗುರುತಿಸಲಾಗಿದ್ದು, ಈತ ಗಾಯಕ್ವಾಡ್ ಪಾಡ ನಿವಾಸಿಯಾಗಿದ್ದಾನೆ. ಮತ್ತೊಂದು ಶಾಕಿಂಗ್ ಸಂಗತಿ ಎಂದರೆ ಈತ ಬೀದಿ ನಾಯಿ ಮೇಲೆ ಅತ್ಯಾಚಾರವೆಸಗುತ್ತಿದ್ದಾಗ ಮತ್ತೊಬ್ಬ ವಿಡಿಯೋ ಮಾಡಿದ್ದಾನೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪ್ರಾಣಿ ಪ್ರಿಯರು ಪೊಲೀಸರಿಗೆ ದೂರು ನೀಡಿದ್ದು, ಇದೀಗ ಪ್ರವೀಣ್ ತಾಂಬೆ ವಿರುದ್ಧ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿರುವುದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಉಲ್ಲಾಸ್ ನಗರದಲ್ಲಿ ಅತ್ಯಾಚಾರದ ಈ ಘಟನೆ ನಡೆದಿದ್ದು, ದೂರು ದಾಖಲಾಗುತ್ತಿದ್ದಂತೆ ಪ್ರವೀಣ್ ತಾಂಬೆ ಪರಾರಿಯಾಗಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...