
ಇಂಥದ್ದೇ ನಿದರ್ಶನವೊಂದು ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವೆ ಟಿ20 ಪಂದ್ಯವೊಂದರ ವೇಳೆ ಜರುಗಿದೆ. ಪಾಕ್‌ನ ಮೊಹಮ್ಮದ್ ರಿಜ್ವಾನ್ ಹಾಗೂ ಫಕರ್ ಜ಼ಮಾನ್ ಬ್ಯಾಟ್ ಮಾಡುತ್ತಿದ್ದ ವೇಳೆ, ವ್ಯಕ್ತಿಯೊಬ್ಬ ತನ್ನ ಪ್ರಿಯತಮೆಗೆ ಪ್ರಪೋಸ್ ಮಾಡುತ್ತಿರುವ ದೃಶ್ಯವನ್ನು ಕ್ಯಾಮೆರಾಗಳು ಸೆರೆ ಹಿಡಿದು, ಲೈವ್ ಪ್ರಸಾರ ಮಾಡಿವೆ.
ಫಿಲ್ ತನ್ನ ಮನದನ್ನೆ ಮುಂದೆ ಮಂಡಿಯೂರಿ ಪ್ರಪೋಸ್ ಮಾಡುತ್ತಲೇ, ’ಡಿಸಿಶನ್ ಪೆಂಡಿಂಗ್’ ಎಂದು ಕ್ರೀಡಾಂಗಣದ ಬೃಹತ್ ಪರದೆ ಮೇಲೆ ಮೂಡಿದೆ. ಕೂಡಲೇ ’ಶೀ ಸೆಡ್ ಎಸ್!’ ಎಂದು ಪರದೆಯಲ್ಲಿ ಬರುತ್ತಲೇ ಸುತ್ತಲೂ ನೆರೆದಿದ್ದ ವೀಕ್ಷಕರಿಂದ ಭಾರೀ ಕರತಾಡನ ಮೂಡಿದೆ.
ಈ ವಿಡಿಯೋ ತುಣುಕನ್ನು ಇಂಗ್ಲೆಂಡ್ ಕ್ರಿಕೆಟ್ ತನ್ನ ಟ್ವೀಟರ್ ಹ್ಯಾಂಡಲ್‌ನಲ್ಲಿ ಶೇರ್ ಮಾಡಿಕೊಂಡಿದೆ.