
ತಮ್ಮ ತಂದೆಯ ಕೊನೆಯ ಆಸೆಯಂತೆ ಕುಟುಂಬವೊಂದು ಆತನ ಚಿತಾಭಸ್ಮವನ್ನ ಅವರ ನೆಚ್ಚಿನ ಪಬ್ನ ಎದುರಿದ್ದ ಚರಂಡಿಯಲ್ಲಿ ವಿಸರ್ಜಿಸಿದೆ. ತಾನು ಶಾಶ್ವತವಾಗಿ ನೆಚ್ಚಿನ ಪಬ್ ಬಳಿಯಲ್ಲೇ ಇರಬೇಕು ಎಂದು ತಂದೆ ಆಸೆಪಟ್ಟಿದ್ದರಿಂದ ಅವರು ಹೇಳಿದಂತೆಯೇ ಕುಟುಂಬಸ್ಥರು ಚಿತಾಭಸ್ಮವನ್ನ ವಿಸರ್ಜಿಸಿದ್ದಾರೆ.
ಕೆವಿನ್ ಎಂಬವರು ತಾವು ಸಾವಿಗೀಡಾಗುವ ಮುನ್ನ ಕುಟುಂಬಸ್ಥರ ಎದುರು ಇಂತಹದ್ದೊಂದು ವಿಚಿತ್ರ ಬೇಡಿಕೆಯನ್ನ ಇಟ್ಟಿದ್ದರು. ಪುತ್ರ ಓವೆನ್ ಹಾಗೂ ಪುತ್ರಿ ಕ್ಯಾಸಿಡಿ ಬಳಿ ತಮ್ಮ ಕೊನೆಯ ಆಸೆಯನ್ನ ಹೇಳಿಕೊಂಡಿದ್ದ ಕೆವಿನ್ 66ನೇ ವಯಸ್ಸಿಗೆ ನಿಧನರಾಗಿದ್ದರು.
ಅಂಗವೈಕಲ್ಯದ ನಡುವೆಯೂ ಕನಸು ನನಸಾಗಿಸಿಕೊಂಡ ಸಾಧಕ….!
ಹೀಗಾಗಿ ಕೆವಿನ್ ಪುತ್ರ ಕೆವಿನ್ರ ಆಸೆಯಂತೆಯೇ ಅವರ ಚಿತಾಭಸ್ಮವನ್ನ ಬಿಯರ್ಗೆ ಪಾನೀಯದೊಂದಿಗೆ ಬೆರೆಸಿದ್ರು. ಅಲ್ಲದೇ ತಂದೆಯ ಅಂತಿಮ ಕಾರ್ಯ ಮಾಡುವ ಮುನ್ನ ಮಾತನಾಡಿದ ಓವೆನ್, ನಿಮಗೆ ಇದು ತೀರಾ ವಿಚಿತ್ರ ಎಂದೆನಿಸಬಹುದು. ಆದರೆ ನನ್ನ ತಂದೆಯ ಕೊನೆ ಆಸೆ ಹೀಗೆ ಇತ್ತು. ಅವರು ಈ ಸ್ಥಳದಲ್ಲಿ ಶಾಶ್ವತವಾಗಿ ಇರಲು ಬಯಸಿದ್ದರು ಎಂದು ಹೇಳಿದ್ದಾರೆ. ಚಿತಾಭಸ್ಮ ತುಂಬಿದ್ದ ಬಿಯರ್ನ್ನು ಓವೆನ್ ಚರಂಡಿಯಲ್ಲಿ ಚೆಲ್ಲಿದ್ದಾರೆ.