ಯುರೇತ್ರಾ ಹಾಗೂ ಗುದದ್ವಾರಗಳ ನಡುವೆ ಅಸಹಜವಾದ ಸುರಂಗವಿರುವ ಕಾರಣ 33 ವರ್ಷದ ವ್ಯಕ್ತಿಯೊಬ್ಬರು ತಮ್ಮ ಶಿಶ್ನದಿಂದ ಮಲ ವಿಸರ್ಜನೆ ಮಾಡಿದರೆ, ಗುದದ್ವಾರದಿಂದ ಮೂತ್ರ ಹೊರಹಾಕುತ್ತಿದ್ದಾರೆ.
ಈ ಅಸಹಜ ಬೆಳವಣಿಗೆಯನ್ನು ಎರಡು ವರ್ಷಗಳ ಕಾಲ ಗಮನಿಸಿದ ಈತ, ವೃಷಣಗಳಲ್ಲಿ ತೀವ್ರ ನೋವು ಕಾಣಿಸಿಕೊಂಡ ಬಳಿಕ ವೈದ್ಯರನ್ನು ಸಂಪರ್ಕಿಸಿದ್ದಾರೆ. ಈತನಿಗೆ ಮೂತ್ರನಾಳದಲ್ಲಿ ಸೋಂಕು ತಗುಲಿದೆ ಎಂದು ಪರೀಕ್ಷೆಗಳಿಂದ ತಿಳಿದು ಬಂದಿದೆ.
ಸಿಟಿ ಸ್ಕ್ಯಾನ್ ಮಾಡಿದಾಗ ’ಫಿಸ್ತುಲಾ’ ಎಂಬ ಅನಿಲಭರಿತ ರಚನೆಯೊಂದು ಕಾಣಿಸಿಕೊಂಡಿದೆ. ಯುರೇತ್ರಾ ಹಾಗೂ ಗುದದ್ವಾರಗಳ ನಡುವೆ ಕಂಡುಬರುವ ಅಸಹಜ ನಾಳ ಈ ಫಿಸ್ತುಲಾ.
ಭಯಂಕರ ಸ್ಫೋಟಕ್ಕೆ ಮೂವರು ಸಾವು; ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ; ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನೂ ನಾನೇ ಭರಿಸುವೆ ಎಂದ ಶಾಸಕ ಜಮೀರ್ ಅಹ್ಮದ್
ಎರಡು ವರ್ಷಗಳ ಹಿಂದೆ ತೀವ್ರವಾದ ಕೊಕೇನ್ ಹಾಗೂ ಫೆನ್ಸಿಕ್ಲಿಡೀನ್ ಚಟದ ಕಾರಣ ಕೋಮಾ ತಲುಪಿದ್ದ ಈತನಿಗೆ ಆ ಸಂದರ್ಭದಲ್ಲಿ ಈ ಅಸಹಜ ಬೆಳವಣಿಗೆಗಳು ಕಂಡುಬರಲಾರಂಭಿಸಿವೆ.
ಮೂತ್ರ ವಿಸರ್ಜನೆಗೆ ಅನುವಾಗಲೆಂದು ಆ ವೇಳೆಯಲ್ಲಿ ಈತನಿಗೆ ಫೋಲೆ ಕ್ಯಾಥೆಟರ್ಅನ್ನು ಅಳವಡಿಸಲಾಗಿತ್ತು.
ಫಿಸ್ತುಲಾವನ್ನು ಮುಚ್ಚಿ ಹಾಕಲು ವಿಶೇಷ ಸರ್ಜರಿ ಮಾಡಿರುವ ವೈದ್ಯರು ಸದ್ಯಕ್ಕೆ ಈತನ ಬಾಧೆಗೊಂದು ಬ್ರೇಕ್ ಹಾಕಿದ್ದಾರೆ.