alex Certify ಭಯಂಕರ ಸ್ಫೋಟಕ್ಕೆ ಮೂವರು ಸಾವು; ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ; ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನೂ ನಾನೇ ಭರಿಸುವೆ ಎಂದ ಶಾಸಕ ಜಮೀರ್ ಅಹ್ಮದ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಯಂಕರ ಸ್ಫೋಟಕ್ಕೆ ಮೂವರು ಸಾವು; ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ; ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನೂ ನಾನೇ ಭರಿಸುವೆ ಎಂದ ಶಾಸಕ ಜಮೀರ್ ಅಹ್ಮದ್

ಬೆಂಗಳೂರು: ಬೆಂಗಳೂರಿನ ಚಾಮರಾಜಪೇಟೆಯ ನ್ಯೂ ತರಗುಪೇಟೆಯಲ್ಲಿ ಭಯಂಕರ ಸ್ಫೋಟಕ್ಕೆ ಮೂವರು ಸಾವನ್ನಪ್ಪಿದ್ದು, ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ನೀಡುವುದಾಗಿ ಶಾಸಕ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಶಾಸಕ ಜಮೀರ್ ಅಹ್ಮದ್, ಗೋದಾಮಿನಲ್ಲಿ ಪಟಾಕಿ ಸಂಗ್ರಹಿಸಲಾಗಿತ್ತು ಎಂಬ ಮಾಹಿತಿ ಇದೆ. ಸ್ಫೊಟದಲ್ಲಿ ಮನೋಹರ್, ಅಸ್ಲಾಂ ಪಾಷ ಹಾಗೂ ಫಯಾಜ್ ಎಂಬ ಮೂವರು ಮೃತಪಟ್ಟಿದ್ದಾರೆ. ನಾಲ್ವರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಮೃತರ ಕುಟುಂಬಕ್ಕೆ ಶಾಸಕನಾಗಿ 2 ಲಕ್ಷ ಪರಿಹಾರ ಘೋಷಿಸುತ್ತೇನೆ. ಇನ್ನು ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನೂ ನಾನೇ ಭರಿಸುತ್ತೇನೆ ಎಂದರು.

Good News:12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಶೀಘ್ರವೇ ಸಿಗಲಿದೆ ಕೊರೊನಾ ಲಸಿಕೆ

ಮೃತರಲ್ಲಿ ಮನೋಹರ್ ಎಂಬಾತ ತಮಿಳುನಾಡು ಮೂಲದವನು. ಉಳಿದಿಬ್ಬರು ಸ್ಥಳೀಯರಾಗಿದ್ದಾರೆ. ಮೂವರು ಕೂಡ ಬಡ ಕುಟುಂಬದವರು. ಸರ್ಕಾರ ಕೂಡ ಕುಟುಂಬದವರಿಗೆ ಪರಿಹಾರ ನೀಡಲಿ ಎಂದು ಒತ್ತಾಯಿಸಿದರು.

ಗೋದಾಮು ಮಾಲೀಕ ಇಲ್ಲಿ ಪಟಾಕಿಯನ್ನು ಸಂಗ್ರಹಿಸಿಟ್ಟು ಬೇರೆಡೆ ಸರಬರಾಜು ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಪಟಾಕಿ ಬಾಕ್ಸ್ ಸ್ಫೋಟಗೊಂಡಿರುವ ಬಗ್ಗೆ ಶಂಕೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...