ತಮ್ಮ ಮಕ್ಕಳೊಂದಿಗೆ ತಂದೆ ಭಾವನಾತ್ಮಕ ಸಂಬಂಧ ಹೊಂದಿರುವುದು ಎಲ್ಲರಿಗೂ ತಿಳಿದದ್ದೇ. ಮಕ್ಕಳಿಗೆ ಸ್ವಲ್ಪವೂ ತೊಂದರೆಯಾಗಬಾರದು ಎಂದು ಅಪ್ಪ-ಅಮ್ಮ ಎಷ್ಟೇ ಕಷ್ಟ ಬಂದರೂ ಅದನ್ನು ಹಿಂದೆ ಸರಿಸಿ ಮಕ್ಕಳನ್ನು ಕಾಪಾಡುತ್ತಾರೆ. ಆದರೆ ಇಲ್ಲೊಂದು ಭಯಾನಕ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಅಪ್ಪನೊಬ್ಬ ತನ್ನ ಪುಟಾಣಿ ಮಗುವಿನ ಜತೆ ಅಪಾಯಕಾರಿ ಸ್ಟಂಟ್ ಮಾಡಿದ್ದಾನೆ.
ಈ ವೈರಲ್ ವಿಡಿಯೋದಲ್ಲಿ ತನ್ನ ಪುಟ್ಟ ಮಗುವಿನ ಪ್ರಾಣವನ್ನೇ ಪಣಕ್ಕಿಟ್ಟು ರಸ್ತೆಯ ನಡುವೆ ಸ್ಟಂಟ್ ಮಾಡಿದ್ದಾನೆ. 32-ಸೆಕೆಂಡಿನ ಈ ವಿಡಿಯೋ ನೋಡಿದವರು ದಿಗ್ಭ್ರಮೆಗೆ ಒಳಗಾಗುವುದು ಖಂಡಿತ.
ಈ ವಿಡಿಯೋದಲ್ಲಿ ಮಗುವಿನ ತಂದೆ, ಮಗುವನ್ನು ಗಾಳಿಯಲ್ಲಿ ಎತ್ತರಕ್ಕೆ ಎಸೆಯುತ್ತಾನೆ. ನಂತರ ಮಗುವನ್ನು ಕ್ಯಾಚ್ ಹಿಡಿಯುತ್ತಾನೆ. ನಂತರ ಮಗುವಿನ ಕಾಲನ್ನಷ್ಟೇ ಹಿಡಿದು ಮಗು ಆಕಾಶದಲ್ಲಿ ತೇಲಾಡುವಂತೆ ಮಾಡುತ್ತಾನೆ. ಮಗುವನ್ನು ಮೇಲೆ ಉಲ್ಟಾ ಎಸೆದು ಅದನ್ನು ಕ್ಯಾಚ್ ಹಿಡಿಯುತ್ತಾನೆ.
ಅಪ್ಪನ ಈ ಆಟಕ್ಕೆ ಮಗು ಕೂಡ ಆರಾಮಾಗಿ ನಗುತ್ತಾ ಎಂಜಾಯ್ ಮಾಡುವುದನ್ನು ನೋಡಬಹುದು. ಆದರೆ ನೋಡುಗರನ್ನು ಮಾತ್ರ ಇದು ಆತಂಕಕ್ಕೆ ತಳ್ಳುತ್ತದೆ. ದಯವಿಟ್ಟು ಯಾರೂ ಇಂಥ ಸಾಹಸ ಮಾಡಬೇಡಿ ಎಂದು ಕಮೆಂಟ್ಗಳ ಸುರಿಮಳೆಯಾಗುತ್ತಿದೆ.
https://twitter.com/Hindu_Virangana/status/1595634131257667585?ref_src=twsrc%5Etfw%7Ctwcamp%5Etweetembed%7Ctwterm%5E1595634131257667585%7Ctwgr%5E6b515481c2331ec826f7fb2ff06db6fe3268946c%7Ctwcon%5Es1_&ref_url=https%3A%2F%2Fwww.n
https://twitter.com/sharmajiihere/status/1595665049351499777?ref_src=twsrc%5Etfw%7Ctwcamp%5Etweetembed%7Ctwterm%5E1595665049351499777%7Ctwgr%5E6b515481c2331ec826f7fb2ff06db6fe3268946c%7Ctwcon%5Es1_&ref_url=https%3A%2F%2Fwww.news18.com%2Fbuzz%2Fman-performs-death-defying-stunts-with-his-toddler-video-infuriates-twitter-6477793.html