ಆಕ್ಷನ್ ಮೂವಿಗಳಿಂದ ಸ್ಫೂರ್ತಿ ಪಡೆದ ವ್ಯಕ್ತಿಯೊಬ್ಬರು ನಿಜಜೀವನದಲ್ಲಿ ಈ ಸಾಹಸ ಮಾಡಲು ಮುಂದಾದ ಘಟನೆಯೊಂದು ಗುಜರಾತ್‌ನಲ್ಲಿ ನಡೆದಿದೆ.
ನಗರದ ಸಾನಿಧ್ಯ ಸೇತುವೆ ಮೇಲಿನ ರೈಲ್ವೇ ಸೇತುವೆ ಮೇಲೆ ಸಾಹಸಗಳನ್ನು ಮಾಡಲು ಮುಂದಾದ ಈತ, ದಿಢೀರ್ ಎಂದು ರೈಲೊಂದು ತಮ್ಮತ್ತ ಅತಿ ಹತ್ತಿರದಲ್ಲೇ ಧಾವಿಸುತ್ತಿರುವುದನ್ನು ಕಂಡು ದಂಗಾಗಿದ್ದಾರೆ.
ಕಾರು ಕದಿಯಲು ಹೇಳಿದ್ದು ದೇವರು ಎಂದ ಕಳ್ಳ….!
ರೈಲ್ವೇ ಹಳಿಯ ಮೇಲೆ ಓಡಿಸಿಕೊಂಡು ಹೋಗುತ್ತಿದ್ದ ಬೈಕ್ ಸಿಕ್ಕಿಹಾಕಿಕೊಂಡಿದ್ದು, ಅದೇ ವೇಳೆ ರೈಲೊಂದು ಆತನ ಬಳಿ ಧಾವಿಸುತ್ತಿರುವುದನ್ನು ಕಂಡ ಸುತ್ತಲಿನ ಜನರು ಆತನಿಗೆ ಹಳಿಯಿಂದ ಆಚೆಗೆ ನೆಗೆಯಲು ಕೂಗಿಕೊಂಡಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಂಡು ಜಿ7 ನಾಯಕರ ಗ್ರೂಪ್ ಫೋಟೋ…!
ನೋಡನೋಡುತ್ತಲೇ ರೈಲು ಬಂದು ಇನ್ನೇನು ಡಿಕ್ಕಿ ಹೊಡೆಯಲಿದೆ ಎನ್ನುವಷ್ಟರಲ್ಲಿ ಆ ವ್ಯಕ್ತಿ ಹಳಿಯಿಂದ ಪವಾಡಸದೃಶವಾಗಿ ಹೊರಗೆ ಹಾರಿದ್ದಾರೆ. ಘಟನೆಯ ವಿಡಿಯೋವನ್ನು ಸ್ಥಳೀಯ ಸುದ್ದಿವಾಹಿನಿಯೊಂದರ ಜಾಲತಾಣದಲ್ಲಿ ಶೇರ್ ಮಾಡಲಾಗಿದೆ.