alex Certify ಎಲೆಕ್ಟ್ರಿಕ್​ ರೇಜರ್​ ಎಂದು ಭಾವಿಸಿ ಗನ್​ ಖರೀದಿ ಮಾಡಿದ ವ್ಯಕ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲೆಕ್ಟ್ರಿಕ್​ ರೇಜರ್​ ಎಂದು ಭಾವಿಸಿ ಗನ್​ ಖರೀದಿ ಮಾಡಿದ ವ್ಯಕ್ತಿ

ಎಲೆಕ್ಟ್ರಿಕ್​ ರೇಜರ್​ ಎಂದು ಭಾವಿಸಿ ವ್ಯಕ್ತಿಯೊಬ್ಬ ಸ್ಟನ್​ ಗನ್​ ಖರೀದಿ ಮಾಡಿದ ಶಾಕಿಂಗ್​ ಘಟನೆ ವರದಿಯಾಗಿದೆ. ಅದೃಷ್ಟವಶಾತ್​​​ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಇಂಗ್ಲೆಂಡ್​​ನ ಬೋಲ್ಟನ್​​ ಡೀನ್​​ನಲ್ಲಿರುವ ರೋಲ್ಯಾಂಡ್​ ರಸ್ತೆಯ 26 ವರ್ಷದ ಮೊಹಮ್ಮದ್​ ಖಾನ್​​ ತಾವು ಈ ವಸ್ತುವನ್ನ ಖರೀದಿ ಮಾಡುವ ವೇಳೆ ಇದರ ನೈಜ ಕಾರ್ಯದ ಬಗ್ಗೆ ಅರಿವು ಹೊಂದಿರಲಿಲ್ಲ ಎಂದು ಹೇಳಿದ್ದಾರೆ.

ಈ ಸಂಬಂಧ ಕೋರ್ಟ್​ಗೆ ಹಾಜರಾದ ಬೋಲ್ಟನ್​ ಡೀನ್​ ಶಸ್ತ್ರಾಸ್ತ್ರವನ್ನ ಹೊಂದಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ.

ಅಪರಿಚಿತರಿಂದ ತಾವು ಗನ್​ ಖರೀದಿ ಮಾಡಿದ್ದಾಗಿ ನ್ಯಾಯಾಲಯದ ಮುಂದೆ ಬೋಲ್ಟನ್​ ಹೇಳಿದ್ದಾರೆ. ಎಲೆಕ್ಟ್ರಿಕ್​ ಶೇವರ್​ ಹಾಗೂ ಚಾರ್ಜರ್​ ಹೊಂದಿರುವ ಬಾಕ್ಸನ್ನು ಅಪರಿಚಿತ ವ್ಯಕ್ತಿ ನೀಡಿದ್ದ ಎನ್ನಲಾಗಿದೆ.

ಮನೆಗೆ ಬಂದ ಬಳಿಕ ಖಾನ್​​ ಈ ಸಾಧನವನ್ನ ಚಾರ್ಜಿಂಗ್​ಗೆ ಹಾಕಿದ್ದಾರೆ. ಅಲ್ಲದೇ ಇದರಿಂದ ಶೇವ್​​ ಮಾಡಲು ಹೋಗಿದ್ದಾರೆ. ಅದೃಷ್ಟವಶಾತ್​​​ ಬೋಲ್ಟನ್​ ಶಾಕ್​ಗೆ ಒಳಗಾಗಿದ್ದಾರೆ. ಸ್ಟನ್​ ಗನ್​​ಗಳು 25 ಕಿಲೋವೋಲ್ಟ್​ ಸಾಮರ್ಥ್ಯ ಹೊಂದಿದೆ. ಈ ವಿಚಾರವಾಗಿ ಮಾತನಾಡಿದ ಪೊಲೀಸರು, ಈತ ಬದುಕುಳಿದಿದ್ದೇ ಒಂದು ಪವಾಡ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...