alex Certify ಚಿಕನ್​ ಫ್ರೈ​ ಮಾಡಲು ಒಲ್ಲೆ ಎಂದ ಪತ್ನಿಯನ್ನು ಕೊಂದ ಪಾಪಿ ಪತಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿಕನ್​ ಫ್ರೈ​ ಮಾಡಲು ಒಲ್ಲೆ ಎಂದ ಪತ್ನಿಯನ್ನು ಕೊಂದ ಪಾಪಿ ಪತಿ…..!

ಚಿಕನ್​ ಫ್ರೈ​ ಮಾಡಲು ಪತ್ನಿ ನಿರಾಕರಿಸಿದಳು ಎಂಬ ಕಾರಣಕ್ಕೆ ಕೋಪಗೊಂಡ ಪತಿ ಪತ್ನಿಯನ್ನೇ ಕೊಲೆ ಮಾಡಿದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಶಿರಿನ್​ ಬಾನು ಕಣ್ಮರೆಯಾಗಿರುವ ಬಗ್ಗೆ ಪೋಷಕರು ದೂರು ದಾಖಲಿಸಿದ ಬಳಿಕ ಪೊಲೀಸರು ಪತಿ ಮುಬಾರಕ್​ ಪಾಷಾ ವಿರುದ್ಧ ಶಂಕಿಸಿದ್ದಾರೆ. ಪೊಲೀಸರು ತನಿಖೆ ನಡೆಸಲು ಮುಬಾರಕ್​ ಪದೇ ಪದೇ ಅಡ್ಡಿಪಡಿಸುತ್ತಿದ್ದ. ಆದರೆ ಸೋಮವಾರ ಪೊಲೀಸ್​ ಠಾಣೆಗೆ ತೆರಳಿದ ಮುಬಾರಕ್​ ಪಾಷಾ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಪೊಲೀಸ್​ ಠಾಣೆಗೆ ತೆರಳಿದ ಮುಬಾರಕ್​ ಪಾಷಾ, ಆಗಸ್ಟ್​ 18ರಂದು ನಾನು ಆಕೆ ಬಳಿ ರಾತ್ರಿ ಊಟಕ್ಕೆ ಚಿಕನ್​ ಫ್ರೈ​ ತಯಾರಿಸುವಂತೆ ಹೇಳಿದ್ದೆ. ಆದರೆ ನಾನು ಮನೆಗೆ ಬಂದ ವೇಳೆ ಚಿಕನ್​ ಫ್ರೈ​ ಇಲ್ಲದ್ದನ್ನು ಕಂಡು ಕೋಪ ತಡೆಯಲು ಆಗಲಿಲ್ಲ. ಈ ಬಗ್ಗೆ ಪತ್ನಿಯನ್ನು ವಿಚಾರಿಸಿದ ವೇಳೆ ಆಕೆ ಆಕ್ರೋಶಭರಿತ ಮಾತುಗಳನ್ನಾಡಿದಳು. ಇದರಿಂದ ಕೋಪಗೊಂಡ ನಾನು ಮರದ ದಿಮ್ಮಿಯಿಂದ ಆಕೆಯ ತಲೆಯನ್ನು ಒಡೆದೆ. ಮಕ್ಕಳು ಮಲಗಿದ್ದ ವೇಳೆ ಪತ್ನಿಯ ಶವವನ್ನು ಗೋಣಿಚೀಲದಲ್ಲಿ ತುಂಬಿ ಚಿಕ್ಕಬಾಣಾವರಕ್ಕೆ ವಿಲೇವಾರಿ ಮಾಡಿದೆ ಎಂದು ಹೇಳಿದ್ದಾನೆ. ಪೊಲೀಸರು ಆರೋಪಿ ಪಾಷಾನನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...