alex Certify ಲಾಡ್ಜ್ ನಲ್ಲೇ ಆಘಾತಕಾರಿ ಘಟನೆ: ಸೋದರನೊಂದಿಗೆ ಅಕ್ರಮ ಸಂಬಂಧ ಹೊಂದಿದ ಪತ್ನಿ ಕೊಂದ ಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಡ್ಜ್ ನಲ್ಲೇ ಆಘಾತಕಾರಿ ಘಟನೆ: ಸೋದರನೊಂದಿಗೆ ಅಕ್ರಮ ಸಂಬಂಧ ಹೊಂದಿದ ಪತ್ನಿ ಕೊಂದ ಪತಿ

ಹೈದರಾಬಾದ್: ತನ್ನ ಸಹೋದರನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಕ್ಕಾಗಿ ಪತಿಯೇ ಪತ್ನಿಯನ್ನು ಕೊಂದಿದ್ದಾನೆ ಎಂದು ಹೈದರಾಬಾದ್‌ ಪೊಲೀಸರು ತಿಳಿಸಿದ್ದಾರೆ.

ಶನಿವಾರ ರಾತ್ರಿ ಹೈದರಾಬಾದ್‌ ನ ಗೌಳಿಗುಡಾ ಪ್ರದೇಶದ ಲಾಡ್ಜ್‌ ನಲ್ಲಿ ವ್ಯಕ್ತಿಯೊಬ್ಬ ತನ್ನ ಸಹೋದರನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳೆಂದು ಆರೋಪಿಸಿ 21 ವರ್ಷದ ಪತ್ನಿಯನ್ನು ಕೊಂದಿದ್ದಾನೆ.

ಒಂದು ತಿಂಗಳ ಹಿಂದೆ ಮಹಿಳೆ ತನ್ನ ಪತಿಯ ಸಹೋದರನನ್ನು ಕೊಲ್ಲಲು ಯತ್ನಿಸಿದ್ದು, ಅಂದಿನಿಂದ ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದ ಕಾರಣ ಪೊಲೀಸರು ಕೂಡ ಹುಡುಕಾಟ ನಡೆಸಿದ್ದರು. ಕೊಲೆಗೆ ಯತ್ನಿಸಿದ ಆರೋಪದ ಮೇಲೆ ರಾಜೇಂದ್ರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನಿಂದ ಗಂಡನ ನೆರವಿನಿಂದ ಬೇರೆ ಬೇರೆ ಲಾಡ್ಜ್ ಗಳಲ್ಲಿ ಆಕೆ ತಲೆಮರೆಸಿಕೊಂಡಿದ್ದಳು. ಈ ನಡುವೆ ಗಂಡನಿಗೆ ಪತ್ನಿ ತನ್ನ ಸಹೋದರನೊಂದಿಗೆ ಅಕ್ರಮ ಸಂಬಂಧ ಹೊಂದಿರುವುದು ಕೊಲೆ ಯತ್ನಕ್ಕೆ ಕಾರಣವೆನ್ನುವುದು ಗೊತ್ತಾಗಿತ್ತು.

ಸೆಕ್ಯೂರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದ ರಾಮಕೃಷ್ಣ ಎಂಬಾತನೇ ಅಪರಾಧ ಎಸಗಿ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ನಿ ಅರುಣಾಳನ್ನು ತಾನೇ ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಲಾಡ್ಜ್ ತಲುಪಿದ ಪೊಲೀಸ್ ಅಧಿಕಾರಿಗಳಿಗೆ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಂಚದ ಮೇಲೆ ಬಿದ್ದಿರುವುದು ಕಂಡು ಬಂದಿದೆ. ರಾಮಕೃಷ್ಣನನ್ನು ವಿಚಾರಣೆಗೊಳಪಡಿಸಿದಾಗ, ಶನಿವಾರ ರಾತ್ರಿ 7 ಗಂಟೆ ಸುಮಾರಿಗೆ ಸೀರೆ ಮತ್ತು ಸ್ಕಾರ್ಫ್ ಬಳಸಿ ತನ್ನ ಎರಡನೇ ಪತ್ನಿ ಅರುಣಾಳನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ. ಅವನ ಯೋಜನೆಯ ಬಗ್ಗೆ ಆಕೆಗೆ ಯಾವುದೇ ಸುಳಿವು ಇರಲಿಲ್ಲ ಎಂದು ಅಫ್ಜಲ್‌ಗುಂಜ್ ಇನ್ಸ್‌ ಪೆಕ್ಟರ್ ಎಂ. ರವೀಂದರ್ ರೆಡ್ಡಿ ಹೇಳಿದ್ದಾರೆ.

ಅವಳು ತನ್ನ ಸಹೋದರನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರಿಂದ, ಅವನು ಅವಳನ್ನು ಕೊಲ್ಲಲು ನಿರ್ಧರಿಸಿದ್ದಾಗಿ ರಾಮಕೃಷ್ಣ ಹೇಳಿಕೊಂಡಿದ್ದಾನೆ. ಕೃತ್ಯ ಎಸಗಿದ ಬಳಿಕ ತನ್ನ ಒಂದು ವರ್ಷದ ಮಗನೊಂದಿಗೆ ಠಾಣೆಗೆ ತೆರಳಿ ಶರಣಾಗಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...