alex Certify 9ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಹೋದವನ ಸ್ಥಿತಿ ಹೀಗಾಯ್ತು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

9ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಹೋದವನ ಸ್ಥಿತಿ ಹೀಗಾಯ್ತು…..!

ಆಯಸ್ಸು ಗಟ್ಟಿಯಾಗಿದ್ರೆ ಯಮನಿಂದಲೂ ಏನು ಮಾಡಲು ಸಾಧ್ಯವಿಲ್ಲ ಎಂಬ ಮಾತಿದೆ. ಇದಕ್ಕೆ ಈ ಘಟನೆ ಉತ್ತಮ ನಿದರ್ಶನ. ಆಯಸ್ಸು ಮುಗಿದಿದ್ರೆ ಒಂದನೇ ಮಹಡಿಯಿಂದ ಜಿಗಿದ್ರೂ ವ್ಯಕ್ತಿ ಸಾಯ್ತಾನೆ. ಆದ್ರೆ ಈ ವ್ಯಕ್ತಿ 9ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ರೂ ಸಾವು ಆತನ ಬಳಿ ಬರಲಿಲ್ಲ.

ಘಟನೆ ಅಮೆರಿಕಾದ ನ್ಯೂಜೆರ್ಸಿಯಲ್ಲಿ ನಡೆದಿದೆ. 9ನೇ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತನ ವಯಸ್ಸು 31 ವರ್ಷ. ಆತ 9ನೇ ಮಹಡಿಯಿಂದ ಜಿಗಿದಿದ್ದಾನೆ. ನೆಲಕ್ಕೆ ಬೀಳುವ ಬದಲು ಕಾರಿನ ಮೇಲೆ ಬಿದ್ದಿದ್ದಾನೆ. ಆತ ಬಿದ್ದ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದೆ. ಆದ್ರೆ ವ್ಯಕ್ತಿ ಬದುಕುಳಿದಿದ್ದಾನೆ.

ಈ ಯೋಜನೆಯಲ್ಲಿ ಹೂಡಿಕೆ ಮಾಡಿ – ಹೆಣ್ಣು ಮಕ್ಕಳ ಭವಿಷ್ಯದ ಚಿಂತೆ ಬಿಡಿ…..!

ವ್ಯಕ್ತಿ ಬಿಎಂಡಬ್ಲ್ಯು ಕಾರ್ ಮೇಲೆ ಬಿದ್ದಿದ್ದಾನೆ ಎನ್ನಲಾಗಿದೆ. ವ್ಯಕ್ತಿಗೆ ಗಾಯಗಳಾಗಿವೆ. ಆದ್ರೆ ಆತ ಜೀವಂತವಾಗಿರುವುದನ್ನು ನೋಡಿ ವೈದ್ಯರೇ ದಂಗಾಗಿದ್ದಾರೆ. ಕಾರಿನಿಂದ ಕಿರುಚಿಕೊಳ್ಳುವ ಶಬ್ಧ ಕೇಳಿದೆ. ಸ್ಥಳೀಯರು ಅಲ್ಲಿಗೆ ಹೋಗಿದ್ದಾರೆ. ಕಾರಿನಲ್ಲಿದ್ದ ವ್ಯಕ್ತಿ ಪರಿಸ್ಥಿತಿ ನೋಡಿ, ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...