ನಿಮ್ಮದೇ ಸ್ವಂತ ಡ್ರೈವ್ ವೇ ಜಾಗದಲ್ಲಿ ನಿಮ್ಮ ಕಾರನ್ನು ಪಾರ್ಕ್ ಮಾಡಿದ್ದರೂ ಸಹ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ರೆ ನಿಮಗೆ ಹೇಗೆ ಅನಿಸಬಹುದು..? ಕೋಪ ಹಾಗೂ ಬೇಸರಗಳೆರಡು ಒಟ್ಟಿಗೆ ಬರುಬಹುದು ಅಲ್ಲವೇ..?
ಇಂಗ್ಲೆಂಡ್ನ ಕಾವೆಂಟ್ರಿ ಎಂಬಲ್ಲೂ ಸಹ ಇಂತದ್ದೇ ಒಂದು ವಿಚಿತ್ರ ಘಟನೆ ಸಂಭವಿಸಿದೆ. ತಮ್ಮದೇ ಡ್ರೈವ್ ವೇ ಪ್ರದೇಶದಲ್ಲಿ ಕಾರನ್ನ ನಿಲ್ಲಿಸಿದ್ದ ವ್ಯಕ್ತಿಗೆ ಟ್ರಾಫಿಕ್ ಪೊಲೀಸರು 2 ಲಕ್ಷ ರೂಪಾಯಿಗೂ ಅಧಿಕ ಹಣ ದಂಡ ವಿಧಿಸಿದ್ದಾರೆ.
ಈ ವ್ಯಕ್ತಿಯು ಪಾರ್ಕಿಂಗ್ ಅನುಮತಿ ಪಡೆಯಲು ವಿಫಲನಾದ ಕಾರಣ ಮೊದಲ ಬಾರಿಗೆ ಸಮಸ್ಯೆಯನ್ನ ಅನುಭವಿಸಿದ್ದಾನೆ. ಹೀಗಾಗಿ ಪರವಾನಿಗೆಯನ್ನ ಪಡೆಯಲು ಅವರು ಸಂಬಂಧಪಟ್ಟ ಕಚೇರಿಯನ್ನ ಸಂಪರ್ಕಿಸಿದ್ದಾರೆ. ಆದರೆ ಹೊಸ ಪರವಾನಿಗೆಗಳು ಲಭ್ಯವಿಲ್ಲ ಎಂದು ಕಚೇರಿ ಮಾಹಿತಿ ನೀಡಿದೆ.