alex Certify ಸ್ವಂತ ಜಾಗದಲ್ಲಿ ಕಾರು ನಿಲ್ಲಿಸಿದರೂ ಬಿತ್ತು 2 ಲಕ್ಷ ರೂಪಾಯಿ ಫೈನ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಂತ ಜಾಗದಲ್ಲಿ ಕಾರು ನಿಲ್ಲಿಸಿದರೂ ಬಿತ್ತು 2 ಲಕ್ಷ ರೂಪಾಯಿ ಫೈನ್​..!

ನಿಮ್ಮದೇ ಸ್ವಂತ ಡ್ರೈವ್​ ವೇ ಜಾಗದಲ್ಲಿ ನಿಮ್ಮ ಕಾರನ್ನು ಪಾರ್ಕ್​ ಮಾಡಿದ್ದರೂ ಸಹ ಟ್ರಾಫಿಕ್​ ಪೊಲೀಸರು ದಂಡ ವಿಧಿಸಿದ್ರೆ ನಿಮಗೆ ಹೇಗೆ ಅನಿಸಬಹುದು..? ಕೋಪ ಹಾಗೂ ಬೇಸರಗಳೆರಡು ಒಟ್ಟಿಗೆ ಬರುಬಹುದು ಅಲ್ಲವೇ..?

ಇಂಗ್ಲೆಂಡ್​ನ ಕಾವೆಂಟ್ರಿ ಎಂಬಲ್ಲೂ ಸಹ ಇಂತದ್ದೇ ಒಂದು ವಿಚಿತ್ರ ಘಟನೆ ಸಂಭವಿಸಿದೆ. ತಮ್ಮದೇ ಡ್ರೈವ್​ ವೇ​ ಪ್ರದೇಶದಲ್ಲಿ ಕಾರನ್ನ ನಿಲ್ಲಿಸಿದ್ದ ವ್ಯಕ್ತಿಗೆ ಟ್ರಾಫಿಕ್​ ಪೊಲೀಸರು 2 ಲಕ್ಷ ರೂಪಾಯಿಗೂ ಅಧಿಕ ಹಣ ದಂಡ ವಿಧಿಸಿದ್ದಾರೆ.

ಈ ವ್ಯಕ್ತಿಯು ಪಾರ್ಕಿಂಗ್​ ಅನುಮತಿ ಪಡೆಯಲು ವಿಫಲನಾದ ಕಾರಣ ಮೊದಲ ಬಾರಿಗೆ ಸಮಸ್ಯೆಯನ್ನ ಅನುಭವಿಸಿದ್ದಾನೆ. ಹೀಗಾಗಿ ಪರವಾನಿಗೆಯನ್ನ ಪಡೆಯಲು ಅವರು ಸಂಬಂಧಪಟ್ಟ ಕಚೇರಿಯನ್ನ ಸಂಪರ್ಕಿಸಿದ್ದಾರೆ. ಆದರೆ ಹೊಸ ಪರವಾನಿಗೆಗಳು ಲಭ್ಯವಿಲ್ಲ ಎಂದು ಕಚೇರಿ ಮಾಹಿತಿ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...