alex Certify ಶಾರೂಕ್ ಪುತ್ರನ ಬಂಧನದ ಬಳಿಕ ವೈರಲ್ ಆಗಿದೆ ಈ ಫೋಟೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾರೂಕ್ ಪುತ್ರನ ಬಂಧನದ ಬಳಿಕ ವೈರಲ್ ಆಗಿದೆ ಈ ಫೋಟೋ…!

ಡ್ರಗ್​ ಸೇವನೆ ಪ್ರಕರಣದ ಅಡಿಯಲ್ಲಿ ಎನ್​ಸಿಬಿ ವಶದಲ್ಲಿರುವ ಶಾರೂಕ್​ ಖಾನ್​ ಪುತ್ರ ಆರ್ಯನ್​ ಖಾನ್​ ಜೊತೆ ಅಧಿಕಾರಿಯೊಬ್ಬರು ಸೆಲ್ಫಿ ತೆಗೆದುಕೊಂಡಿದ್ದಾರೆಂಬ ಫೋಟೋವೊಂದು ವೈರಲ್​ ಆಗಿತ್ತು.

ಆದರೆ ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಡ್ರಗ್​ ನಿಗ್ರಹ ದಳ ಆರ್ಯನ್​ ಖಾನ್​ ಜೊತೆ ಸೆಲ್ಫಿ ತೆಗೆದುಕೊಂಡಿರುವ ವ್ಯಕ್ತಿ ತನಿಖಾ ದಳದ ಅಧಿಕಾರಿಯಲ್ಲ ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದೆ.

ಆರ್ಯನ್​ ಖಾನ್​ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡಿರುವ ಈ ವ್ಯಕ್ತಿಯು ಎನ್​ಸಿಬಿ ಅಧಿಕಾರಿ ಅಥವಾ ಸಿಬ್ಬಂದಿ ಅಲ್ಲ ಎಂದು ಎನ್​ಸಿಬಿ ಸ್ಪಷ್ಟನೆ ನೀಡುತ್ತಿದೆ ಎಂದು ತನಿಖಾ ಸಂಸ್ಥೆ ಪ್ರಕಟಣೆ ನೀಡಿದೆ.

ಆದಾಯ ತೆರಿಗೆ ಇಲಾಖೆಯ ಖಾಲಿ ಹುದ್ದೆ ಭರ್ತಿಗೆ ಪ್ರಕ್ರಿಯೆ

ಶನಿವಾರ ಸಂಜೆ ಎನ್​ಸಿಬಿ ಅಧಿಕಾರಿಗಳು ಪ್ರವಾಸಿಗರ ಸೋಗಿನಲ್ಲಿ ಗೋವಾದ ಸಮುದ್ರದಲ್ಲಿ ಕಾರ್ಡೆಲಿಯಾ ಕ್ರೂಸ್​​​ ಹಡಗಿನಲ್ಲಿ ನಡೆಯುತ್ತಿದ್ದ ರೇವಾ ಪಾರ್ಟಿಯಲ್ಲಿ ಭಾಗಿಯಾಗಿತ್ತು . ಈ ಪಾರ್ಟಿಯಲ್ಲಿ ಭಾಗಿಯಾಗಿದ್ದ ಆರ್ಯನ್​ ಖಾನ್​, ಅರ್ಬಾಜ್​ ಮಲ್ಲಿಕ್​, ಮುನ್ಮುನ್​ ಧಮೇಚಾ, ನೂಪುರ್​​ ಸಾರಿಕಾ, ಇಸ್ಮೀತ್​​ ಸಿಂಗ್, ಮೋಹಕ್​ ಜಸ್ವಾಲ್​, ವಿಕ್ರಾಂತ್​ ಚೋಕರ್​, ಗೋಮಿತ್​ ಚೋಪ್ರಾರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...