ಡ್ರಗ್ ಸೇವನೆ ಪ್ರಕರಣದ ಅಡಿಯಲ್ಲಿ ಎನ್ಸಿಬಿ ವಶದಲ್ಲಿರುವ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಜೊತೆ ಅಧಿಕಾರಿಯೊಬ್ಬರು ಸೆಲ್ಫಿ ತೆಗೆದುಕೊಂಡಿದ್ದಾರೆಂಬ ಫೋಟೋವೊಂದು ವೈರಲ್ ಆಗಿತ್ತು.
ಆದರೆ ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಡ್ರಗ್ ನಿಗ್ರಹ ದಳ ಆರ್ಯನ್ ಖಾನ್ ಜೊತೆ ಸೆಲ್ಫಿ ತೆಗೆದುಕೊಂಡಿರುವ ವ್ಯಕ್ತಿ ತನಿಖಾ ದಳದ ಅಧಿಕಾರಿಯಲ್ಲ ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದೆ.
ಆರ್ಯನ್ ಖಾನ್ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡಿರುವ ಈ ವ್ಯಕ್ತಿಯು ಎನ್ಸಿಬಿ ಅಧಿಕಾರಿ ಅಥವಾ ಸಿಬ್ಬಂದಿ ಅಲ್ಲ ಎಂದು ಎನ್ಸಿಬಿ ಸ್ಪಷ್ಟನೆ ನೀಡುತ್ತಿದೆ ಎಂದು ತನಿಖಾ ಸಂಸ್ಥೆ ಪ್ರಕಟಣೆ ನೀಡಿದೆ.
ಆದಾಯ ತೆರಿಗೆ ಇಲಾಖೆಯ ಖಾಲಿ ಹುದ್ದೆ ಭರ್ತಿಗೆ ಪ್ರಕ್ರಿಯೆ
ಶನಿವಾರ ಸಂಜೆ ಎನ್ಸಿಬಿ ಅಧಿಕಾರಿಗಳು ಪ್ರವಾಸಿಗರ ಸೋಗಿನಲ್ಲಿ ಗೋವಾದ ಸಮುದ್ರದಲ್ಲಿ ಕಾರ್ಡೆಲಿಯಾ ಕ್ರೂಸ್ ಹಡಗಿನಲ್ಲಿ ನಡೆಯುತ್ತಿದ್ದ ರೇವಾ ಪಾರ್ಟಿಯಲ್ಲಿ ಭಾಗಿಯಾಗಿತ್ತು . ಈ ಪಾರ್ಟಿಯಲ್ಲಿ ಭಾಗಿಯಾಗಿದ್ದ ಆರ್ಯನ್ ಖಾನ್, ಅರ್ಬಾಜ್ ಮಲ್ಲಿಕ್, ಮುನ್ಮುನ್ ಧಮೇಚಾ, ನೂಪುರ್ ಸಾರಿಕಾ, ಇಸ್ಮೀತ್ ಸಿಂಗ್, ಮೋಹಕ್ ಜಸ್ವಾಲ್, ವಿಕ್ರಾಂತ್ ಚೋಕರ್, ಗೋಮಿತ್ ಚೋಪ್ರಾರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.