alex Certify ಹಾರುತ್ತಿದ್ದ ವಿಮಾನದಿಂದ ಉದ್ಯಾನವನದಲ್ಲಿ ಬಿತ್ತು ಮಲ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾರುತ್ತಿದ್ದ ವಿಮಾನದಿಂದ ಉದ್ಯಾನವನದಲ್ಲಿ ಬಿತ್ತು ಮಲ..!

ವ್ಯಕ್ತಿಯೊಬ್ಬ ತನ್ನ ಉದ್ಯಾನವನದಲ್ಲಿದ್ದಾಗ ಮೇಲಿಂದ ಧೊಪ್ಪನೆ ರಾಶಿರಾಶಿ ಮಾನವ ತ್ಯಾಜ್ಯ ಬಿದ್ದಿರುವ ಆಘಾತಕಾರಿ ಘಟನೆ ಇಂಗ್ಲೆಂಡ್‌ನ ವಿಂಡ್ಸರ್‌ನಲ್ಲಿ ನಡೆದಿದೆ.

ವಿಮಾನದಿಂದ ಮಲವನ್ನು ಈ ರೀತಿ ವಿಲೇವಾರಿ ಮಾಡಲಾಗಿದೆ. ಈ ವೇಳೆ ವ್ಯಕ್ತಿಯ ತೋಟಕ್ಕೆ ಭಾರಿ ಪ್ರಮಾಣದಲ್ಲಿ ಮಾನವ ತ್ಯಾಜ್ಯ ಚೆಲ್ಲಲಾಗಿದೆ. ಈ ತ್ಯಾಜ್ಯದಿಂದ ಆ ವ್ಯಕ್ತಿಯ ತೋಟ ಒಂದಷ್ಟು ಮುಚ್ಚಿ ಹೋಗಿದೆ.

“ವಿಮಾನಗಳಿಂದ ಹೆಪ್ಪುಗಟ್ಟಿದ ಕೊಳಚೆ ನೀರಿನೊಂದಿಗೆ ಪ್ರತಿವರ್ಷ ಹಲವಾರು ಘಟನೆಗಳು ನಡೆಯುತ್ತವೆ ಎಂದು ನನಗೆ ತಿಳಿದಿದೆ. ಆದರೆ, ಇದು ಹೆಪ್ಪುಗಟ್ಟಲಿಲ್ಲ ಬದಲಾಗಿ ಅವರ ಇಡೀ ತೋಟವು ತುಂಬಾ ಅಹಿತಕರ ರೀತಿಯಲ್ಲಿ ಚೆಲ್ಲಾಪಿಲ್ಲಿಯಾಗಿತ್ತು. ಅವರು ಆ ಸಮಯದಲ್ಲಿ ತೋಟದಲ್ಲಿದ್ದರು, ಅದು ನಿಜವಾಗಿಯೂ ಭಯಾನಕ ಅನುಭವ” ಎಂದು ಡೇವಿಸ್ ಎಂಬುವವರು ಹೇಳಿದ್ದಾರೆ.

ವಿಮಾನ ಶೌಚಾಲಯಗಳು ಕೊಳಚೆ ನೀರನ್ನು ವಿಶೇಷ ಟ್ಯಾಂಕ್‌ಗಳಲ್ಲಿ ಸಂಗ್ರಹಿಸುತ್ತವೆ. ನಂತರ ಅವುಗಳನ್ನು ಡಂಪ್ ಮಾಡಲಾಗುತ್ತದೆ. ಇನ್ನು ನಿವಾಸಿಯು ರೂಟ್ ಟ್ರ್ಯಾಕಿಂಗ್ ಅಪ್ಲಿಕೇಶನ್ ಬಳಸಿ ಏರ್‌ಲೈನ್ ಅನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗಿದೆ. ಆದರೆ, ಏರ್‌ಲೈನ್‌ ಹೆಸರನ್ನು ಬಹಿರಂಗಪಡಿಸಲಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...