
ನ್ಯೂಯಾರ್ಕ್ ಸಿಟಿಯಲ್ಲಿ ಚಿತ್ರೀಕರಿಸಿದ್ದು ಎನ್ನಲಾದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನತೆ ಮಾಡರ್ನ್ ಸೂಪರ್ ಹೀರೋ ಎಂದು ಕರೆದಿದ್ದಾರೆ. ಈ ವಿಡಿಯೋದಲ್ಲಿ ಐಕಾನಿಕ್ ಟೈಮ್ಸ್ ಸ್ಕ್ವೇರ್ ಎದುರು ವ್ಯಕ್ತಿ ಡ್ರೋನ್ ಕ್ಯಾಮರಾದ ಮೇಲೆ ಹತ್ತಿ ಹಾರಿದ್ದಾನೆ.
ಈ ಡ್ರೋನ್ ಕ್ಯಾಮರಾದ ಮೇಲಿರುವ ವ್ಯಕ್ತಿ ಯುಟ್ಯೂಬರ್ ಹಂಟರ್ ಕೋವಾಲ್ಡ್ ಎಂದು ಗುರುತಿಸಲಾಗಿದೆ. ಈ ವಿಡಿಯೋವನ್ನ ಇನ್ಸ್ಟಾಗ್ರಾಂನಲ್ಲಿ ಮೊದಲು ಶೇರ್ ಮಾಡಲಾಗಿದ್ದು, ಇದೀಗ ಸೋಶಿಯಲ್ ಮೀಡಿಯಾದ ವಿವಿಧ ವೇದಿಕೆಗಳಲ್ಲೂ ವೈರಲ್ ಆಗ್ತಿದೆ.
ಇನ್ನು ಈ ಸಾಧನದ ಬಗ್ಗೆ ಮಾತನಾಡಿರುವ ಕೋವಾಲ್ಡ್, ಇದೊಂದು ಇಂಜಿನಿಯರ್ಡ್ ಸಾಧನವಾಗಿದೆ. ಈ ಸಾಧನವನ್ನ ಕಂಡು ಹಿಡಿಯಲು ನಾನು ವರ್ಷಗಳನ್ನೇ ಸವೆಸಿದ್ದೇನೆ. ಎರಡ್ಮೂರು ಬಾರಿ ಪ್ರಯತ್ನ ವಿಫಲವಾದದ ಬಳಿಕ ನಾನೀಗ ಗೆದ್ದಿದ್ದೇನೆ ಎಂದು ಹೇಳಿದ್ದಾರೆ.
ಈ ವಿಡಿಯೋ ಟ್ವಿಟರ್ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು 7ಮಿಲಿಯನ್ಗೂ ಅಧಿಕ ವೀವ್ಸ್ ಸಂಪಾದಿಸಿದೆ. ಕಮೆಂಟ್ ಸೆಕ್ಷನ್ನಲ್ಲಿ ನೆಟ್ಟಿಗರು ಆಶ್ಚರ್ಯ ಹೊರಹಾಕಿದ್ದಾರೆ.