ವೆಡ್ಡಿಂಗ್ ಪ್ಲಾನರ್ಗಳ ಕೆಲಸವೇ ಮದುವೆ ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಳ್ಳೋದು. ಇದೇ ವಿಚಾರವನ್ನ ಇನ್ನಷ್ಟು ಗಂಭೀರವಾಗಿ ತೆಗೆದುಕೊಂಡ ಫಿಲಿಫೈನ್ಸ್ನ ವೆಡ್ಡಿಂಗ್ ಪ್ಲಾನರ್ ಒಬ್ಬ ಗಾಳಿಯಲ್ಲಿ ವಧುವಿನ ಗೌನ್ ಹಾರಬಾರದು ಎಂಬ ಕಾರಣಕ್ಕೆ ಗೌನ್ನ ಅಡಿಯಲ್ಲೇ ಅಡಗಿದ್ದಾನೆ.
ವಧುವಿನ ಗೌನ್ ಸಿದ್ಧಪಡಿಸುವ ಕೆಲಸ ಮಾಡುವ ರೋಲ್ ಲ್ಯುನೆಸ್ಸಾ ಎಂಬವರು ಗಾಳಿಯಿಂದ ವಧುವಿನ ಡ್ರೆಸ್ ಹಾರಬಾರದು ಎಂಬ ಕಾರಣಕ್ಕೆ ತಾನೇ ವಧುವಿನ ಗೌನ್ ಒಳಕ್ಕೆ ಹೊಕ್ಕಿ ಕುಳಿತಿದ್ದಾರೆ.
ಈ ಮದುವೆಯು ಜೂನ್ 6ರಂದು ಫಿಲಿಫೈನ್ಸ್ನ ಲ್ಯೂ ಬೀಚ್ ರೆಸಾರ್ಟ್ನಲ್ಲಿ ಆಯೋಜನೆಗೊಂಡಿತ್ತು.
ಪೋಷಕರ ಜೊತೆ ವಧು ನಡೆದುಕೊಂಡು ಹೋಗುತ್ತಿದ್ದ ವೇಳೆ ಆಕೆಯ ಗೌನ್ ಗಾಳಿಯ ನಡುವೆಯೂ ತನ್ನಿಂದ ತಾನೇ ಸರಿ ಹೋಗುತ್ತಿರೋದನ್ನ ಕಾಣಬಹುದಾಗಿದೆ. ಆಕೆ ತನ್ನ ಜಾಗವನ್ನ ತಲುಪಿದ ತಕ್ಷಣ ಉಡುಪಿನ ಒಳಗಿಂದ ಈ ವ್ಯಕ್ತಿ ಹೊರಗೆ ಬರುತ್ತಾನೆ. ಅಲ್ಲಿ ನೆರೆದ ಅತಿಥಿಗಳು ಸಹ ಈ ಘಟನೆಯಿಂದ ಆಶ್ಚರ್ಯಕ್ಕೆ ಒಳಗಾದಂತೆ ಕಂಡುಬಂದಿಲ್ಲ. ಆದರೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.