alex Certify ಪ್ರಭುದೇವ ಸ್ಟೈಲ್ ನಲ್ಲಿ ನರ್ತಿಸಿದ ವ್ಯಕ್ತಿ: ನೆಟ್ಟಿಗರು ಬೆರಗು……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಭುದೇವ ಸ್ಟೈಲ್ ನಲ್ಲಿ ನರ್ತಿಸಿದ ವ್ಯಕ್ತಿ: ನೆಟ್ಟಿಗರು ಬೆರಗು……!

ಪ್ರಭುದೇವ ಅಂದಾಕ್ಷಣ ನೆನಪಾಗೋದು ಅವರ ಡ್ಯಾನ್ಸಿಂಗ್ ಸ್ಟೈಲ್. ದಕ್ಷಿಣ ಭಾರತದಲ್ಲಂತೂ ಅತ್ಯಂತ ಜನಪ್ರಿಯ ನೃತ್ಯಗಾರ. ಇವರ ನೃತ್ಯದ ಚಲನೆಗಳನ್ನು ಅನುಭವಿ ನರ್ತಕರು ಸಹ ನಕಲಿಸುವುದು ಭಾರಿ ಕಷ್ಟ.

ಪ್ರಭುದೇವ ಅವರು ದೇಶದ ಅತ್ಯುತ್ತಮ ನೃತ್ಯ ಸಂಯೋಜಕರಲ್ಲಿ ಒಬ್ಬರು. ಅವರ ಅದ್ಭುತ ಹೆಜ್ಜೆಗಳೊಂದಿಗೆ ನಮಗೆ ಅನೇಕ ಅದ್ಭುತ ಹಾಡುಗಳನ್ನು ಅವರು ನೀಡಿದ್ದಾರೆ. ಇದೀಗ ಮಧ್ಯವಯಸ್ಕ ವ್ಯಕ್ತಿಯೊಬ್ಬರು ಬಹಳ ಸರಳವಾಗಿ ಪ್ರಭುದೇವ ರೀತಿ ಸ್ಟೆಪ್ಸ್ ಹಾಕಿದ್ದಾರೆ.

ಹೌದು, ಪ್ರಭುದೇವ ಅವರ ಚಿಕ್ಕು ಬುಕ್ಕು ರೈಲೇ ಹಾಡಿಗೆ ವ್ಯಕ್ತಿಯೊಬ್ಬರು ಬೊಂಬಾಟ್ ಆಗಿ ಅವರಂತೆಯೇ ಸ್ಟೆಪ್ಸ್ ಹಾಕಿದ್ದಾರೆ. ಈ ವಿಡಿಯೋ ಇದೀಗ ಅಂತರ್ಜಾಲದಲ್ಲಿ ರೌಂಡ್ ಹೊಡೆಯುತ್ತಿದ್ದು, ಮಧ್ಯ ವಯಸ್ಕ ವ್ಯಕ್ತಿಯ ಡಾನ್ಸ್ ನೆಟ್ಟಿಗರನ್ನು ಬೆರಗುಗೊಳಿಸಿದೆ. ವ್ಯಕ್ತಿಯು ಪ್ರಭುದೇವ ಅವರ ಅಪ್ರತಿಮ ನೃತ್ಯವನ್ನು ನಕಲು ಮಾಡಿದ್ದಾರೆ.

ಮೂವರು ವ್ಯಕ್ತಿಗಳು ಮಾರುಕಟ್ಟೆ ಪ್ರದೇಶದಲ್ಲಿ ನಿಂತು ಮಾತನಾಡುತ್ತಿರುವಾಗ ಮಧ್ಯದಲ್ಲಿ ಸಾಂಪ್ರದಾಯಿಕ ದಕ್ಷಿಣ ಭಾರತೀಯ ಶೈಲಿಯ ಲುಂಗಿ ಮತ್ತು ಶರ್ಟ್‌ ಅನ್ನು ತೊಟ್ಟಿದ್ದಾರೆ. ಈ ವೇಳೆ ಅವರು 1993 ರ ಜಂಟಲ್‌ಮ್ಯಾನ್ ಚಲನಚಿತ್ರದ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ. ಡಾನ್ಸ್ ಮಾಡಿದ ವ್ಯಕ್ತಿಯನ್ನು ರಮೇಶ್ ಎಂದು ಗುರುತಿಸಲಾಗಿದೆ.

ಜುಲೈ 4 ರಂದು ರಾಜ್ ಕುಮಾರ್ ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರರು ಪೋಸ್ಟ್ ಮಾಡಿದ ಈ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಇವರ ನೃತ್ಯ ನೋಡಿದ ನೆಟ್ಟಿಗರು ಪ್ರಶಂಸೆಗಳ ಮಹಾಪೂರವನ್ನೇ ಹರಿಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...