alex Certify ಲಂಡನ್ ನಲ್ಲಿನ SBI ಬ್ಯಾಂಕಿಗೆ ಹೋದ ಯುವಕನಿಗೆ ಕಂಡಿದ್ದೇನು ಗೊತ್ತಾ…? ಜಾಲತಾಣಗಳಲ್ಲಿ ಹರಿದಾಡುತ್ತಿದೆ ಜೋಕ್ ಗಳ ಸುರಿಮಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಂಡನ್ ನಲ್ಲಿನ SBI ಬ್ಯಾಂಕಿಗೆ ಹೋದ ಯುವಕನಿಗೆ ಕಂಡಿದ್ದೇನು ಗೊತ್ತಾ…? ಜಾಲತಾಣಗಳಲ್ಲಿ ಹರಿದಾಡುತ್ತಿದೆ ಜೋಕ್ ಗಳ ಸುರಿಮಳೆ

ಭಾರತದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಜನಸಾಮಾನ್ಯರು ಕೆಲಸ ಮಾಡಿಸಿಕೊಳ್ಳುವುದು ಅಷ್ಟೇನು ಸುಲಭವಲ್ಲ. ಇದಕ್ಕೆ ಸರ್ಕಾರಿ ಬ್ಯಾಂಕ್ ಗಳು ಸಹ ಹೊರತಲ್ಲ. ಕೆಲವೊಂದು ಬ್ಯಾಂಕುಗಳಿಗೆ ತೆರಳಿದ ವೇಳೆ ಅಲ್ಲಿನ ಸಿಬ್ಬಂದಿಯ ವರ್ತನೆ ಅಸಹನೀಯವಾಗಿರುತ್ತದೆ. ಜೊತೆಗೆ ಒಂದು ವೇಳೆ ಅವಧಿ ಮೀರಿದ್ದರೆ ಅದೆಷ್ಟೇ ತುರ್ತಿದ್ದರೂ ಸಹ ಸುತರಾಂ ಕೆಲಸ ಮಾಡಿಕೊಡುವುದಿಲ್ಲ.

ಇಂತಹುದೇ ಒಂದು ವಿಭಿನ್ನ ಘಟನೆ ಲಂಡನ್ ಕಿಂಗ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಯುವಕನೊಬ್ಬನ ಪ್ರಕರಣದಲ್ಲಿ ನಡೆದಿದೆ. ಈ ಯುವಕ ಕಾರ್ಯನಿಮಿತ್ತ ಲಂಡನ್ ನಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಚೇರಿಗೆ ಹೋಗಿದ್ದು, ಇನ್ನೂ ಮಧ್ಯಾಹ್ನ 12-30 ರ ಸುಮಾರಿಗೆ ಲಂಚ್ ಬ್ರೇಕ್ ಎಂಬ ಬೋರ್ಡ್ ಹಾಕಿದ್ದರು ಎನ್ನಲಾಗಿದೆ. ಅಷ್ಟೇ ಅಲ್ಲ ಈ ಸಂದರ್ಭದಲ್ಲಿ ಕಚೇರಿಯೂ ಸಹ ಮುಚ್ಚಿತ್ತು ಎನ್ನಲಾಗಿದೆ.

ಈ ಕುರಿತಂತೆ ಅಭಯ್ ಎಂಬ ಯುವಕ ಚಿತ್ರ ಸಮೇತ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಹಾಕಿದ್ದು, ಇದು ಈಗ ಮೀಮ್ ಗಳ ಸುರಿಮಳೆಗೆ ಕಾರಣವಾಗಿದೆ. ಕೆಲವರು, ಅದು ಭಾರತೀಯ ಬ್ಯಾಂಕ್ ಹಾಗಾಗಿ ಇಲ್ಲಿಯ ನೀತಿಯನ್ನೇ ಅನುಸರಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದರೆ, ಮತ್ತೆ ಕೆಲವರು, ನೀವು ಭಾರತ ಬಿಡಬಹುದು. ಆದರೆ ಭಾರತ ನಿಮ್ಮನ್ನು ಬಿಡುವುದಿಲ್ಲ ಎಂದು ತಮಾಷೆ ಮಾಡಿದ್ದಾರೆ. ಮತ್ತಷ್ಟು ಜನ ಅವರು ಲಂಚ್ ಬ್ರೇಕ್ ತೆಗೆದುಕೊಳ್ಳುವುದರಲ್ಲಿ ತಪ್ಪೇನು. ಅವರು ಸಹ ಎಲ್ಲರಂತೆ ಮನುಷ್ಯರು ಎಂದು ಬ್ಯಾಂಕ್ ಸಿಬ್ಬಂದಿ ಪರ ವಾದಿಸಿದ್ದಾರೆ. ಮತ್ತೆ ಹಲವರು ಅಮಿತಾಬ್‌ ಬಚ್ಚನ್‌ ಅಭಿನಯದ ಮೊಹಬ್ಬತೇನ್‌ ಚಿತ್ರದ ಡೈಲಾಗ್‌ ʼಪರಂಪರಾ, ಪ್ರತಿಷ್ಟಾ, ಅನುಶಾಸನ್‌ʼ ನೆನಪಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...