
ಕಾರಿನ ಕಿಟಕಿ ಗಾಜಿಗೆ ಢಿಕ್ಕಿ ಹೊಡೆದು ಈಜುಕೊಳಕ್ಕೆ ಬಿದ್ದ ಕೂಕಬುರ‍್ರಾ ಪಕ್ಷಿಯೊಂದು ಒದ್ದಾಡುವುದನ್ನು ಕಂಡ ವ್ಯಕ್ತಿಯೊಬ್ಬರು ಅದರ ನೆರವಿಗೆ ಬಂದು ಜೀವರಕ್ಷಕ ಕ್ರಿಯೆಗಳನ್ನು ಮಾಡಿ ಉಳಿಸಿದ ವಿಡಿಯೋವೊಂದು ಮತ್ತೊಮ್ಮೆ ವೈರಲ್ ಆಗಿದೆ.
ಭೀಕರ ಹತ್ಯೆ ಕಂಡು ಬೆಚ್ಚಿ ಬಿದ್ದ ಜನ: ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ
ಈಜುಕೊಳಕ್ಕೆ ಬೀಳುತ್ತಲೇ ಧ್ವನಿ ಬರುತ್ತಿದ್ದರೂ ಸಹ ಅಲುಗಾಡಲು ಆಗದೇ ಬಿದ್ದಿದ್ದ ಕೂಕಬುರ‍್ರಾಗೆ ಸಿಪಿಆರ್ ಮಾಡುವ ಮೂಲಕ ಮರುಜೀವ ಕೊಟ್ಟ ಈ ವ್ಯಕ್ತಿ ಮತ್ತು ಪಕ್ಷಿಗಳಿಬ್ಬರೂ ಒಳ್ಳೆ ಫ್ರೆಂಡ್ಸ್ ಆಗಿಬಿಟ್ಟಿದ್ದರು.
ಪ್ಲಾಸ್ಟಿಕ್ ಬಾಕ್ಸ್‌ಗಳ ಕಲೆ ತೆಗೆಯುವುದು ಹೇಗೆ….?
ಗಾಳಿಯ ಕಂಪ್ರೆಸರ್‌ಅನ್ನು ಪಕ್ಷಿಯ ಕೊಕ್ಕಿಗೆ ಅಳವಡಿಸಿದ ಈ ವ್ಯಕ್ತಿ, ಪಕ್ಷಿಗೆ ಉಸಿರಾಡಲು ನೆರವಾಗುವಂತೆ ಮಾಡಿದ್ದಾರೆ. ನೋಡನೋಡುತ್ತಲೇ ತನ್ನ ರೆಕ್ಕೆಗಳನ್ನು ಅಲುಗಾಡಿಸುತ್ತಾ ಮತ್ತೆ ಹಾರಲು ಸಿದ್ಧವಾದ ಕೂಕಬುರ‍್ರಾ, ಇದಾದ ಬಳಿಕ ಪ್ರತಿನಿತ್ಯ ಅದೇ ಜಾಗಕ್ಕೆ ಬಂದು ತನ್ನ ಜೀವ ಉಳಿಸಿದ ವ್ಯಕ್ತಿಯನ್ನು ಭೇಟಿಯಾಗುತ್ತಿತ್ತು.
https://twitter.com/sandeepifs/status/1402178467257487373?ref_src=twsrc%5Etfw%7Ctwcamp%5Etweetembed%7Ctwterm%5E1402178467257487373%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fman-gives-cpr-to-dying-bird-to-save-its-life-old-viral-video-makes-internet-emotional-1812393-2021-06-08