alex Certify ಮೋಟಾರ್​ ಸೈಕಲ್​ ಗೆ ಬದಲಾಗಿ ಪತ್ನಿಗೆ ಹಾರ ಹಾಕಿದ ಭೂಪ; ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೋಟಾರ್​ ಸೈಕಲ್​ ಗೆ ಬದಲಾಗಿ ಪತ್ನಿಗೆ ಹಾರ ಹಾಕಿದ ಭೂಪ; ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ ಈ ವಿಡಿಯೋ

ಸಾಮಾಜಿಕ ಜಾಲತಾಣದಲ್ಲಿ ನಗಿಸುವ ಕಂಟೆಂಟ್​ಗೆ ಕೊರತೆ ಇರುವುದೇ ಇಲ್ಲ. ಇದನ್ನು ಸಾಬೀತುಪಡಿಸಲು ಹೊಸ ವಿಡಿಯೋ ಹರಿದಾಡುತ್ತಿದೆ.

ವ್ಯಕ್ತಿಯೊಬ್ಬ ತನ್ನ ಹೊಸ ಮೋಟಾರ್​ ಸೈಕಲ್​ಗೆ ಹಾರ ಹಾಕುವ ಬದಲು ತನ್ನ ಹೆಂಡತಿಯ ಕೊರಳಿಗೆ ಹಾರ ಹಾಕಲು ಮುಂದಾಗಿ, ಕೊನೆಗೆ ತನ್ನ ಯಡವಟ್ಟನ್ನು ತಾನೇ ನೆನಪಿಸಿಕೊಂಡು ನಕ್ಕಿದ್ದಾರೆ. ಈ ಮುದ್ದಾದ ಕ್ಲಿಪ್​ ಅನ್ನು ಚಿಕೂ ಎಂಬ ಪುಟವು ಟ್ವಿಟರ್​ನಲ್ಲಿ ಹಂಚಿಕೊಂಡಿದೆ.

ಶೋ ರೂಂನಲ್ಲಿ ಹೊಸ ಮೋಟಾರ್ ​ಬೈಕ್​ ಖರೀದಿಸಿದ ಕುಟುಂಬ ಅದನ್ನು ಸ್ವೀಕರಿಸುವ ಸಡಗರದಲ್ಲಿರುತ್ತದೆ. ವಾಹನಕ್ಕೆ ರಿಬ್ಬನ್​ ಕಟ್ಟಿದ್ದು, ಶೋರೂಂನವರು ಹಾರವನ್ನು ಸಿದ್ಧಪಡಿಸುತ್ತಿದ್ದರು. ತಂದೆ ಹಾರಕ್ಕಾಗಿ ಕಾಯುತ್ತಿರುವಾಗ ಮಗ ತನ್ನ ತಾಯಿ ಹೊಚ್ಚ ಹೊಸ ಮೋಟಾರ್​ ಸೈಕಲ್​ನೊಂದಿಗೆ ಪೋಸ್​ ನೀಡುವಂತೆ ಹೇಳಿದ್ದಾನೆ. ಇದೇ ವೇಳೆ ಸೇಲ್ಸ್​ ಮ್ಯಾನ್​ ಹಾರವನ್ನು ಕುಟುಂಬದ ಯಜಮಾನನ ಕೈಗೆ ನೀಡಿದ ತಕ್ಷಣ, ಆತ ಆ ವಾಹನಕ್ಕೆ ಹಾಕುವ ಬದಲು ಫೋಟೋಗೆ ಫೋಸ್​ ನೀಡುತ್ತಾ ನಿಂತಿದ್ದ ತನ್ನ ಪತ್ನಿಯ ಕೊರಳಿಗೆಹಾಕಲು ಹೊರಡುತ್ತಾನೆ.

ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡ ನಂತರ 3 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ನೆಟ್ಟಿಗರು ಕಾಮೆಂಟ್​ ಮಳೆಗರೆದಿದ್ದಾರೆ. ವಿಡಿಯೋ ನೋಡಿ ನಕ್ಕು ನಲಿದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...