ಸಾಮಾಜಿಕ ಜಾಲತಾಣದಲ್ಲಿ ನಗಿಸುವ ಕಂಟೆಂಟ್ಗೆ ಕೊರತೆ ಇರುವುದೇ ಇಲ್ಲ. ಇದನ್ನು ಸಾಬೀತುಪಡಿಸಲು ಹೊಸ ವಿಡಿಯೋ ಹರಿದಾಡುತ್ತಿದೆ.
ವ್ಯಕ್ತಿಯೊಬ್ಬ ತನ್ನ ಹೊಸ ಮೋಟಾರ್ ಸೈಕಲ್ಗೆ ಹಾರ ಹಾಕುವ ಬದಲು ತನ್ನ ಹೆಂಡತಿಯ ಕೊರಳಿಗೆ ಹಾರ ಹಾಕಲು ಮುಂದಾಗಿ, ಕೊನೆಗೆ ತನ್ನ ಯಡವಟ್ಟನ್ನು ತಾನೇ ನೆನಪಿಸಿಕೊಂಡು ನಕ್ಕಿದ್ದಾರೆ. ಈ ಮುದ್ದಾದ ಕ್ಲಿಪ್ ಅನ್ನು ಚಿಕೂ ಎಂಬ ಪುಟವು ಟ್ವಿಟರ್ನಲ್ಲಿ ಹಂಚಿಕೊಂಡಿದೆ.
ಶೋ ರೂಂನಲ್ಲಿ ಹೊಸ ಮೋಟಾರ್ ಬೈಕ್ ಖರೀದಿಸಿದ ಕುಟುಂಬ ಅದನ್ನು ಸ್ವೀಕರಿಸುವ ಸಡಗರದಲ್ಲಿರುತ್ತದೆ. ವಾಹನಕ್ಕೆ ರಿಬ್ಬನ್ ಕಟ್ಟಿದ್ದು, ಶೋರೂಂನವರು ಹಾರವನ್ನು ಸಿದ್ಧಪಡಿಸುತ್ತಿದ್ದರು. ತಂದೆ ಹಾರಕ್ಕಾಗಿ ಕಾಯುತ್ತಿರುವಾಗ ಮಗ ತನ್ನ ತಾಯಿ ಹೊಚ್ಚ ಹೊಸ ಮೋಟಾರ್ ಸೈಕಲ್ನೊಂದಿಗೆ ಪೋಸ್ ನೀಡುವಂತೆ ಹೇಳಿದ್ದಾನೆ. ಇದೇ ವೇಳೆ ಸೇಲ್ಸ್ ಮ್ಯಾನ್ ಹಾರವನ್ನು ಕುಟುಂಬದ ಯಜಮಾನನ ಕೈಗೆ ನೀಡಿದ ತಕ್ಷಣ, ಆತ ಆ ವಾಹನಕ್ಕೆ ಹಾಕುವ ಬದಲು ಫೋಟೋಗೆ ಫೋಸ್ ನೀಡುತ್ತಾ ನಿಂತಿದ್ದ ತನ್ನ ಪತ್ನಿಯ ಕೊರಳಿಗೆಹಾಕಲು ಹೊರಡುತ್ತಾನೆ.
ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡ ನಂತರ 3 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ನೆಟ್ಟಿಗರು ಕಾಮೆಂಟ್ ಮಳೆಗರೆದಿದ್ದಾರೆ. ವಿಡಿಯೋ ನೋಡಿ ನಕ್ಕು ನಲಿದಿದ್ದಾರೆ.