alex Certify ಕಡಿದಾದ ಬೆಟ್ಟವೇರಿದವನಿಗೆ ದಂಡದ ಶಿಕ್ಷೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಡಿದಾದ ಬೆಟ್ಟವೇರಿದವನಿಗೆ ದಂಡದ ಶಿಕ್ಷೆ

ಸೈಮನ್​ ಡೇ ಎಂಬ ಹೆಸರಿನ ವ್ಯಕ್ತಿ ಆಸ್ಟ್ರೇಲಿಯಾದ ಉಲುರು- ಕಟಾ ಟ್ಜುಟಾ ರಾಷ್ಟ್ರೀಯ ಉದ್ಯಾನವನದಲ್ಲಿರುವ ಉಲುರು ಎಂಬ ನಿರ್ಬಂಧಿತ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದ್ದಕ್ಕಾಗಿ ಶಿಕ್ಷೆಗೊಳಗಾಗಿದ್ದಾನೆ.

ಆಸ್ಟ್ರೇಲಿಯದ ಉತ್ತರ ಭಾಗದ ಆಲಿಸ್​ ಸ್ಪ್ರಿಂಗ್ಸ್​ಬಳಿಯ ಮೂಲನಿವಾಸಿಗಳ ಸ್ಥಳದಲ್ಲಿ ಪವಿತ್ರ ಬೆಟ್ಟ ಏರಿದ್ದಕ್ಕಾಗಿ ಆತನಿಗೆ ಶಿಕ್ಷೆ ವಿಧಿಸಲಾಗಿದೆ ಮತ್ತು ಅದಕ್ಕಾಗಿ 2,500 ಡಾಲರ್​ ದಂಡ ವಿಧಿಸಲಾಗಿದೆ.

ಅನಂಗು ಗುಂಪಿನ ಸಾಂಪ್ರದಾಯಿಕ ಉಲುರು- ಕಟಾ ಟ್ಜುಟಾವನ್ನು ಜಂಟಿಯಾಗಿ ನೋಡಿಕೊಳ್ಳುವ ರಾಷ್ಟ್ರೀಯ ಉದ್ಯಾನವನ ಏಜೆನ್ಸಿಯ ನಿರ್ವಹಣೆ ಪಾರ್ಕ್ಸ್​ ಆಸ್ಟ್ರೇಲಿಯಾವು ಈ ನಿರ್ಧಾರವನ್ನು ಸ್ವಾಗತಿಸಿದೆ.

ರಾಷ್ಟ್ರೀಯ ಉದ್ಯಾನವನಗಳ ನಿರ್ದೇಶಕರ ವಕ್ತಾರರು ಈ ಬಗ್ಗೆ ಮಾಹಿತಿ ನೀಡಿ, ಆಸ್ಟ್ರೇಲಿಯನ್​ ಸರ್ಕಾರಿ ನಿಗಮವು ಪವಿತ್ರ ಸ್ಥಳಗಳ ರಕ್ಷಣೆಯನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತದೆ. ಉಲುರು ಅನಂಗುಗೆ ಹೆಚ್ಚಿನ ಆಧ್ಯಾತ್ಮಿಕ ಮಹತ್ವ ಹೊಂದಿದೆ ಎಂದಿದ್ದಾರೆ.

ಪ್ರವಾಸಿ ಚಟುವಟಿಕೆ, ಸಫಾರಿ ಮಾಡುವುದು ಮುಂತಾದ ಪ್ರವಾಸಿ ಚಟುವಟಿಕೆಗಳನ್ನು ಸಂರ್ಪೂಣವಾಗಿ ನಿಷೇಧಿಸಿದ ನಂತರ, ಅತಿಕ್ರಮಣ ಮಾಡಿದ ಆರೋಪ ಹೊತ್ತಿರುವ 44 ವರ್ಷದ ವ್ಯಕ್ತಿ ಸಂರಕ್ಷಿತ ಬಂಡೆಯನ್ನು ಏರಿದ ಆರೋಪಕ್ಕೆ ಗುರಿಯಾದ ಮೊದಲ ವ್ಯಕ್ತಿಯಾಗಿದ್ದಾರೆ.

2017ರಲ್ಲಿ ಅನಂಗು ಜನರಿಗೆ ಆ ಪ್ರದೇಶದ ಆಧ್ಯಾತ್ಮಿಕ ಪ್ರಾಮುಖ್ಯತೆಯಿಂದಾಗಿ ಬೆಟ್ಟ ಏರುವುದನ್ನು ನಿಷೇಧಿಸಲು ಸರ್ವಾನುಮತದಿಂದ ಮತ ಹಾಕಿತು. ಕಡಿದಾದ ಪ್ರದೇಶದಿಂದ ಬಹಳಷ್ಟು ಜನರು ಸಾವನ್ನಪ್ಪಿದ್ದಾರೆ ಅನೇಕರು ಗಾಯಗೊಂಡಿದ್ದಾರೆ. ಬಂಡೆಯ ತಳದ ಸುತ್ತಲೂ ನಡೆಯಲು ಅನುಮತಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...