ಸಮುದ್ರದ ಆಳವನ್ನು ಬಗೆದಷ್ಟೂ ಲೆಕ್ಕವಿಲ್ಲದ ಕೌತುಕಗಳು ಕಾಣಸಿಗುತ್ತದೆ. ಅದರಲ್ಲೂ ಹೈಟೆಕ್ ಕ್ಯಾಮರಾಗಳಲ್ಲಿ ಸುಂದರ ಸಮುದ್ರ ಜೀವಿಗಳನ್ನು ಕಣ್ತುಂಬಿಕೊಳ್ಳುವುದೇ ಒಂದು ಆನಂದ. ಇದೇ ರೀತಿಯ ವಿಚಿತ್ರ ಜೀವಿಯೊಂದು ರಷ್ಯಾದಲ್ಲಿ ಮೀನುಗಾರನೊಬ್ಬನ ಬಲೆಗೆ ಬಂದು ಬಿದ್ದಿದೆ.
39 ವರ್ಷದ ರೋಮನ್ ಫೆಡರೋಟ್ಸವ್ ಎಂಬ ಹೆಸರಿನ ಮೀನುಗಾರ ಈ ವಿಚಿತ್ರ ಮೀನೊಂದನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೀನು ನೋಡೋಕೆ ಥೇಟ್ ಹಲ್ಲಿರುವ ಚೀಸ್ ಬರ್ಗರ್ನಂತೆ ಕಾಣುತ್ತಿದೆ..! ಹಡಗಿನಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆಯಲ್ಲಿ ಈ ವಿಚಿತ್ರ ಮೀನು ರೋಮನ್ ಕಣ್ಣಿಗೆ ಬಿದ್ದಿದೆ.
ಈ ವಿಚಿತ್ರ ಮೀನಿನ ಫೋಟೋವನ್ನು ರೋಮನ್ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಈ ಮೀನಿನ ಫೋಟೋವನ್ನು ನೋಡಿದ ನೆಟ್ಟಿಗರು ಇದು ಥೇಟ್ ಚೀಸ್ ಬರ್ಗರ್ಗೆ ಹಲ್ಲು ಬಂದಂತೆ ಕಾಣುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅನೇಕರು ಇದನ್ನು ಚಿಕನ್ ಸ್ಯಾಂಡ್ವಿಚ್ ಅಂತಾ ಕೂಡ ಕರೆದಿದ್ದಾರೆ.
ಈ ಮೀನಿನ ಹೆಸರು ಅಥವಾ ಇದು ಯಾವ ಜಾತಿಗೆ ಸೇರಿದ್ದು ಎಂಬುದರ ಬಗ್ಗೆ ಇನ್ನೂ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಅಂದಹಾಗೆ ರೋಮನ್ ಈ ರೀತಿ ವಿಚಿತ್ರ ಮೀನಿನ ಶೋಧ ಮಾಡಿದ್ದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಲಿಪ್ಸ್ಟಿಕ್ ಹಾಕಿದಂತೆ ಕಾಣುತ್ತಿದ್ದ ಮೀನೊಂದನ್ನೂ ಇವರು ಪತ್ತೆ ಮಾಡಿದ್ದರು. ಕಡು ಹಳದಿ ಕಣ್ಣಿನ ಮೀನು ಸೇರಿದಂತೆ ಚಿತ್ರ ವಿಚಿತ್ರ ಮೀನುಗಳನ್ನು ಶೋಧಿಸಿದ್ದಾರೆ.