alex Certify ಫಿಟ್ನೆಸ್ ತರಬೇತಿಗಾಗಿ ಮೇಕೆಯೊಂದಿಗೆ ಹೋರಾಟ…! ಗೆದ್ದವರ್ಯಾರು ಗೊತ್ತಾ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫಿಟ್ನೆಸ್ ತರಬೇತಿಗಾಗಿ ಮೇಕೆಯೊಂದಿಗೆ ಹೋರಾಟ…! ಗೆದ್ದವರ್ಯಾರು ಗೊತ್ತಾ ?

ವ್ಯಕ್ತಿಯೊಬ್ಬ ತನ್ನ ಫಿಟ್​ನೆಸ್​ ತರಬೇತಿಗಾಗಿ ಬಲಿಷ್ಠ ಮೇಕೆಯ ಸಹಾಯವನ್ನು ಪಡೆದುಕೊಳ್ಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಆ ಕ್ಲಿಪ್​ ಅನ್ನು ಕೆಡಾಟ್​ ಹೆಸರಿನ ಬಳಕೆದಾರರು ಟ್ವೀಟರ್​ನಲ್ಲಿ ಹಂಚಿಕೊಂಡಿದ್ದು, 5.2 ಮಿಲಿಯನ್​ ವೀಕ್ಷಣೆಯಾಗಿದೆ.

ದೊಡ್ಡ ಬಂಡೆಯ ಮೇಲೆ ಮೇಕೆ ಇದ್ದು ನೆಲದ ಮೇಲೆ ಆ ಫಿಟ್ನೆಸ್​ ವ್ಯಕ್ತಿ ಇದ್ದು, ಆತ ತನ್ನ ತಲೆಯ ಮೂಲಕ ಮೇಕೆಯನ್ನು ತಳ್ಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆತ ತನ್ನ ಎಲ್ಲಾ ಶಕ್ತಿ ಬಳಸುತ್ತಿದ್ದಾನೆ, ಮೇಕೆ ಸಹ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ.

ಸುಮಾರು 20 ಸೆಕೆಂಡುಗಳ ಕಾಲ ಎರಡೂ ಕಡೆ ಪೈಪೋಟಿ ನಡೆದ ಬಳಿಕ ಮೇಕೆ ತನ್ನ ಶಕ್ತಿಯಿಂದ ಫಿಟ್ನೆಸ್​ ವ್ಯಕ್ತಿಯನ್ನು ದೂರ ತಳ್ಳುವಲ್ಲಿ ಯಶಸ್ವಿಯಾಯಿತು.

ನೆಟ್ಟಿಗರಿಗೆ ಈ ವಿಡಿಯೋ ಖುಷಿಕೊಟ್ಟಿದೆ. ಆದರೆ, ಕೆಲವರು ಇದು ಅಪಾಯಕಾರಿ ಎಂದು ಹೇಳಿದ್ದಾರೆ. ಮೇಕೆ ಅವನ ಮೇಲೆ ದಾಳಿ ಮಾಡಿದರೆ ತಲೆಗೆ ಗಾಯವಾಗಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...