ವ್ಯಕ್ತಿಯೊಬ್ಬ ತನ್ನ ಫಿಟ್ನೆಸ್ ತರಬೇತಿಗಾಗಿ ಬಲಿಷ್ಠ ಮೇಕೆಯ ಸಹಾಯವನ್ನು ಪಡೆದುಕೊಳ್ಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಆ ಕ್ಲಿಪ್ ಅನ್ನು ಕೆಡಾಟ್ ಹೆಸರಿನ ಬಳಕೆದಾರರು ಟ್ವೀಟರ್ನಲ್ಲಿ ಹಂಚಿಕೊಂಡಿದ್ದು, 5.2 ಮಿಲಿಯನ್ ವೀಕ್ಷಣೆಯಾಗಿದೆ.
ದೊಡ್ಡ ಬಂಡೆಯ ಮೇಲೆ ಮೇಕೆ ಇದ್ದು ನೆಲದ ಮೇಲೆ ಆ ಫಿಟ್ನೆಸ್ ವ್ಯಕ್ತಿ ಇದ್ದು, ಆತ ತನ್ನ ತಲೆಯ ಮೂಲಕ ಮೇಕೆಯನ್ನು ತಳ್ಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆತ ತನ್ನ ಎಲ್ಲಾ ಶಕ್ತಿ ಬಳಸುತ್ತಿದ್ದಾನೆ, ಮೇಕೆ ಸಹ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ.
ಸುಮಾರು 20 ಸೆಕೆಂಡುಗಳ ಕಾಲ ಎರಡೂ ಕಡೆ ಪೈಪೋಟಿ ನಡೆದ ಬಳಿಕ ಮೇಕೆ ತನ್ನ ಶಕ್ತಿಯಿಂದ ಫಿಟ್ನೆಸ್ ವ್ಯಕ್ತಿಯನ್ನು ದೂರ ತಳ್ಳುವಲ್ಲಿ ಯಶಸ್ವಿಯಾಯಿತು.
ನೆಟ್ಟಿಗರಿಗೆ ಈ ವಿಡಿಯೋ ಖುಷಿಕೊಟ್ಟಿದೆ. ಆದರೆ, ಕೆಲವರು ಇದು ಅಪಾಯಕಾರಿ ಎಂದು ಹೇಳಿದ್ದಾರೆ. ಮೇಕೆ ಅವನ ಮೇಲೆ ದಾಳಿ ಮಾಡಿದರೆ ತಲೆಗೆ ಗಾಯವಾಗಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
https://twitter.com/KdotUntamed/status/1506803141748183040?ref_src=twsrc%5Etfw%7Ctwcamp%5Etweetembed%7Ctwterm%5E1506803141748183040%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-goat-man-fitness-training-bakre-ki-ladai-fight-5516563%2F