ಮಾದಕ ದ್ರವ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಲಾಸ್ ಏಂಜಲೀಸ್ ವಿಮಾನ ನಿಲ್ದಾಣದ ಟಾರ್ಮ್ಯಾಕ್‌ನಲ್ಲಿ ಇದ್ದ ವಿಮಾನವೊಂದರ ಕಾಕ್‌ಪಿಟ್ ಒಳಗೆ ಪ್ರವೇಶಿಸಿ, ತುರ್ತು ನಿರ್ಗಮನ ದ್ವಾರ ತೆರೆದು ಅಲ್ಲಿಂದ ಜಂಪ್ ಮಾಡಿದ ಘಟನೆ ಕಳೆದ ವಾರ ಜರುಗಿದೆ. ಸರ್ಜರಿಗೊಳಗಾಗಿರುವ ಈತ ತಾನು ಮಾಡಿದ ಎಡವಟ್ಟಿಗೆ ತಪ್ಪಿತಸ್ಥ ಎಂದು ಕೋರ್ಟ್‌ನಲ್ಲಿ ಸಾಬೀತಾದರೆ 20 ವರ್ಷ ಜೈಲಿಗೆ ಹೋಗಲಿದ್ದಾನೆ.
ವಿಕ್ಟೋರಿಯಾ ಡೊಮಿಂಗೆಜ಼್ ಹೆಸರಿನ 33 ವರ್ಷದ ಈ ವ್ಯಕ್ತಿ ಮೆಕ್ಸಿಕೋದ ಕಾಬೋ ಸಾನ್ ಲೂಕಾಸ್‌ನವನಾಗಿದ್ದು, ಸಾಲ್ಟ್ ಲೇಕ್ ಸಿಟಿಗೆ ಹೋಗುವವನಿದ್ದ. ಆದರೆ ಕನೆಕ್ಟಿಂಗ್ ವಿಮಾನ ಸಿಗದೇ ಇದ್ದ ಕಾರಣ ಲಾಸ್‌ಏಂಜಲೀನ್‌ಲ್ಲಿ ರಾತ್ರಿಯೊಂದನ್ನು ಕಳೆದ ಈತ ಸಿಕ್ಕಾಪಟ್ಟೆ ಬಿಯರ್ ಕುಡಿದಿದ್ದಲ್ಲದೇ, $20 ಮೌಲ್ಯದ ಕ್ರಿಸ್ಟಲ್ ಮೆತ್ ಸೇವಿಸಿದ್ದಾನೆ. ಇದೇ ದ್ರವ್ಯ ಸೇವನೆ ಮಾಡಿಕೊಂಡು ಮಾರನೇ ದಿನ ಉತಾಹ್‌ಗೆ ಫ್ಲೈಟ್ ಏರಲು ಬಂದಿದ್ದಾನೆ.
ʼಕೊರೊನಾ ಲಸಿಕೆʼ ಅಭಿಯಾನದಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಿದೆ ಈ ಗ್ರಾಮ
ವಿಮಾನ ನಿಲ್ದಾಣ ಪ್ರವೇಶಿಸುವ ಮುನ್ನ ಇನ್ನಷ್ಟು ಮಾದಕ ದ್ರವ್ಯ ಸೇವನೆ ಮಾಡಿದ ಈತ ತನ್ನ ವಿಮಾನ ಮಿಸ್ ಮಾಡಿಕೊಂಡು ರಾತ್ರಿಯೆಲ್ಲಾ ಬೀದಿ ಬೀದಿ ಅಲೆದಿದ್ದಾನೆ.
ಕಳೆದ ಶುಕ್ರವಾರ ತನ್ನ ಎರಡನೇ ಫ್ಲೈಟ್ ಅನ್ನೂ ಮಿಸ್ ಮಾಡಿಕೊಂಡ ಈತ ಸಾಲ್ಟ್ ಲೇಕ್ ಸಿಟಿಗೆ ಮತ್ತೊಂದು ಫ್ಲೈಟ್‌ನಲ್ಲಿ ಹೋಗಲು ವ್ಯವಸ್ಥೆಯಾಗಿತ್ತು. ಆದರೆ ಈ ವಿಮಾನ ಪ್ರವೇಶಿಸುವ ಮುನ್ನ ಇನ್ನಷ್ಟು ಚಿತ್ ಆಗಿ ಬಂದಿದ್ದ ಡೊಮಿಂಗೆಜ಼್, ವಿಮಾನದ ಕಾಕ್‌ಪಿಟ್ ಪ್ರವೇಶಿಸಲು ಯತ್ನಿಸಿದ್ದಾನೆ. ಅದಾಗದೇ ಇದ್ದ ಬಳಿಕ ತುರ್ತು ನಿರ್ಗಮನ ದ್ವಾರದ ಮೂಲಕ ಹೊರಗೆ ಜಂಪ್ ಮಾಡಿದ್ದಾನೆ.