alex Certify ʼಕೊರೊನಾ ಲಸಿಕೆʼ ಅಭಿಯಾನದಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಿದೆ ಈ ಗ್ರಾಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾ ಲಸಿಕೆʼ ಅಭಿಯಾನದಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಿದೆ ಈ ಗ್ರಾಮ

Charkhi Dadri village 1st to achieve 100% vaccination in Haryana - Hindustan Times

ದೇಶದೆಲ್ಲೆಡೆ 18 ವರ್ಷ ಮೇಲ್ಪಟ್ಟ ಮಂದಿಗೆ ಕೋವಿಡ್‌ ಲಸಿಕೆ ಹಾಕುವ ಕಾರ್ಯಕ್ರಮ ಭರದಿಂದ ಸಾಗುತ್ತಿದೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಗ್ರಾಮಸ್ಥನೂ ಕನಿಷ್ಠ ಒಂದು ಶಾಟ್ ಕೋವಿಡ್ ಲಸಿಕೆ ಪಡೆಯುವ ಮೂಲಕ ಹರಿಯಾಣಾದ ಚರ್ಕಿ ದಾದ್ರಿ ಜಿಲ್ಲೆಯ ಗೋವಿಂದ್‌ಪುರ ಗ್ರಾಮವು ಕೋವಿಡ್ ಲಸಿಕೆಯ 100% ಕವರೇಜ್ ಸಾಧಿಸಿದ ದೇಶದ ಮೊದಲ ಗ್ರಾಮವಾಗಿದೆ.

ಮೆಚ್ಯೂರಿಟಿ ವಯಸ್ಸು ತಲುಪಿದ 562 ಮಂದಿ ಈ ಊರಿನಲ್ಲಿದ್ದಾರೆ. ಇದೇ ವೇಳೆ, 45 ವರ್ಷ ಮೇಲ್ಪಟ್ಟ ಎಲ್ಲಾ ಗ್ರಾಮಸ್ಥರಿಗೂ ಲಸಿಕೆ ಹಾಕುವ ಕೆಲಸವನ್ನು ಈ ಊರಿನಲ್ಲಿ ಮೇ 13ರಂದೇ ಮುಗಿಸಲಾಗಿದೆ. ಮಾರ್ಚ್ 16ರಂದು ಈ ಊರಿನಲ್ಲಿ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಗಿತ್ತು ಎಂದು ಮುಖ್ಯ ವೈದ್ಯಾಧಿಕಾರಿ ಭೂಪಿಂದರ್‌ ಶೆಯೊರನ್ ತಿಳಿಸಿದ್ದಾರೆ.

BIG NEWS: ʼಕಿಸಾನ್ ಸಮ್ಮಾನ್ʼ ನಿಧಿ ಪಡೆಯುತ್ತಿದ್ದ 8 ಲಕ್ಷ ಅನರ್ಹ ಜನ್‌ ಧನ್ ಖಾತೆ ಪತ್ತೆ

“ಲಸಿಕೆ ಪಡೆದ 562 ಮಂದಿಯಲ್ಲಿ, 120 ಮಂದಿ ಎರಡೂ ಲಸಿಕೆ ಪಡೆದಿದ್ದಾರೆ. ಆರಂಭದಲ್ಲಿ ಲಸಿಕೆ ಪಡೆಯಲು ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದರು. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಪ್ರಕರಣಗಳು ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆಯಲು ಜನರು ಬರಲಾರಂಭಿಸಿದರು” ಎಂದು ಶೆಯರನ್ ಹೇಳುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...