alex Certify ಬೈಕ್‌ ಸವಾರರಿಗೆ ಏಕಾಏಕಿ ಎದುರಾಯ್ತು ಹುಲಿ; ಬೆಚ್ಚಿಬೀಳಿಸುವ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೈಕ್‌ ಸವಾರರಿಗೆ ಏಕಾಏಕಿ ಎದುರಾಯ್ತು ಹುಲಿ; ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಕಾಡು ಪ್ರಾಣಿಯು ರಸ್ತೆಯನ್ನು ದಾಟುತ್ತಿರುವುದನ್ನು ತೋರಿಸುವ ಸಾಕಷ್ಟು ವಿಡಿಯೋಗಳು ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಅಂಥದ್ದೇ ಒಂದು ವಿಡಿಯೋ ಇಲ್ಲಿದೆ. ಸ್ವಲ್ಪ ಹೆಚ್ಚೂ ಕಡಿಮೆ ಆಗಿದ್ದರೂ ಇಬ್ಬರು ಬೈಕ್​ ಸವಾರರ ಜೀವಕ್ಕೇ ಕುತ್ತಾಗುವಂಥದ್ದಾಗಿರುವ ಭಯಾನಕ ವಿಡಿಯೋ ಇದು.‌

ಭಾರತೀಯ ಅರಣ್ಯ ಸೇವೆಯ (ಐಎಫ್‌ಎಸ್) ಅಧಿಕಾರಿ ಸುಶಾಂತ್​ ನಂದಾ ಅವರು ತಮ್ಮ ಟ್ವಿಟ್ಟರ್​ನಲ್ಲಿ ಈ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ.

ಇದರಲ್ಲಿ ಹುಲಿಯೊಂದು ರಸ್ತೆ ದಾಟುತ್ತಿದೆ. ಆ ಸಂದರ್ಭದಲ್ಲಿ ಅಲ್ಲಿದ್ದ ವಾಹನದಿಂದ ಈ ಹುಲಿಯ ಚಿತ್ರ ಶೂಟ್​ ಮಾಡಲಾಗುತ್ತಿದೆ. ಹುಲಿ ರಸ್ತೆ ದಾಟುತ್ತಿದ್ದುದರಿಂದ ಅವರು ಅಲ್ಲಿಯೇ ನಿಂತುಕೊಂಡಿದ್ದಾರೆ. ಆದರೆ ಬೈಕ್​ನಲ್ಲಿ ಬಂದ ಸವಾರರು ಸುಮ್ಮನೇ ನಿಂತುಕೊಳ್ಳುವುದನ್ನು ಬಿಟ್ಟು ಮುಂದೆ ಹೋಗುವ ಸಾಹಸ ಮಾಡಿದ್ದಾರೆ.

ಅಲ್ಲಿ ರಸ್ತೆ ದಾಟುತ್ತಿದ್ದ ಹುಲಿ ಸಡನ್​ ಆಗಿ ಬೈಕ್​ನತ್ತ ನೋಡಿದಾಗ ಸವಾರ ಬೆಚ್ಚಿಬಿದ್ದಿದ್ದಾನೆ, ಬೈಕ್​ ಅನ್ನು ಹಿಂದಕ್ಕೆ ತೆಗೆದುಕೊಂಡಿದ್ದಾನೆ. ಹುಲಿಯ ಮೂಡ್​ ಚೆನ್ನಾಗಿತ್ತೇನೋ, ಸುಮ್ಮನೇ ಅತ್ತ ಕಡೆ ವಾಪಸ್​ ಹೋಗುವುದನ್ನು ವಿಡಿಯೋದಲ್ಲಿ ನೋಡಬಹುದು. ಪ್ರಾಣಿಗಳು ರಸ್ತೆ ದಾಟುತ್ತಿರುವಾಗ ಹುಚ್ಚರಾಗಿ ವರ್ತಿಸಿದರೆ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ ಎಂದು ಹಲವರು ಕಮೆಂಟ್​ ಮೂಲಕ ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...