
ಜಿಮ್ಗಳಲ್ಲಿ ಟ್ರೆಡ್ಮಿಲ್ ಇರುವುದು ವ್ಯಾಯಾಮ ಮಾಡಲು. ಆದರೆ ಇಲ್ಲೊಬ್ಬ ಯುವಕ ಟ್ರೆಡ್ಮಿಲ್ ಮಾಡುತ್ತಲೇ ನೃತ್ಯ ಮಾಡುತ್ತಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೈ ರಾಮಾ ಎಂಬ ಬಾಡಿವುಡ್ ಹಾಡಿಗೆ ಈ ಯುವಕ ನೃತ್ಯ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅಲೋಕ್ ಶರ್ಮಾ ಅವರು ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ವಿವಿಧ ಹಾಡುಗಳಿಗೆ ನೃತ್ಯ ಮಾಡುವ ವಿಡಿಯೋಗಳನ್ನು ನಿಯಮಿತವಾಗಿ ಪೋಸ್ಟ್ ಮಾಡುವ ಶರ್ಮಾ ಅವರ ಈ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಈ ಬಾರಿ 1995ರಲ್ಲಿ ತೆರೆಕಂಡ ರಂಗೀಲಾ ಚಿತ್ರದ ಹಾಡಿಗೆ ಹೆಜ್ಜೆ ಹಾಕಿರುವುದಕ್ಕೆ ನೆಟ್ಟಿಗರು ಭಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ 30 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದ್ದು, ಹಲವಾರು ಮಂದಿ ಕಮೆಂಟ್ ಮಾಡುತ್ತಿದ್ದಾರೆ.