alex Certify ಒಂದು ಮಿಲಿಯನ್ ವೀಕ್ಷಣೆಗಳೊಂದಿಗೆ ವೈರಲ್ ಆಗ್ತಿದೆ ವ್ಯಕ್ತಿಯೊಬ್ಬರು ಎಲೆಕೋಸು ಕತ್ತರಿಸುವ ವಿಡಿಯೋ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದು ಮಿಲಿಯನ್ ವೀಕ್ಷಣೆಗಳೊಂದಿಗೆ ವೈರಲ್ ಆಗ್ತಿದೆ ವ್ಯಕ್ತಿಯೊಬ್ಬರು ಎಲೆಕೋಸು ಕತ್ತರಿಸುವ ವಿಡಿಯೋ..!

Man cuts cabbage at lightning speed in viral video with over 1 million views.  Watch - Trending News Newsಸಾಮಾಜಿಕ ಮಾಧ್ಯಮದಲ್ಲಿ ತಮಾಷೆಯ, ಅದ್ಭುತವಾದ, ಸುಂದರವಾದ ಹಲವಾರು ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತದೆ. ಇದೀಗ ವ್ಯಕ್ತಿಯೊಬ್ಬರು ಎಲೆಕೋಸು ಕತ್ತರಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

ಒಬ್ಬ ವ್ಯಕ್ತಿಯು ಎಲೆಕೋಸುಗಳ ಹೆಚ್ಚುವರಿ ಎಲೆಗಳು ಮತ್ತು ಕಾಂಡಗಳನ್ನು ಇತರರು ಗೋಣಿಚೀಲದಲ್ಲಿ ಪ್ಯಾಕ್ ಮಾಡುವ ಮೊದಲು ಮಿಂಚಿನ ವೇಗದಲ್ಲಿ ಕತ್ತರಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅಲ್ಲಿ ಇನ್ನೊಬ್ಬ ವ್ಯಕ್ತಿ ಅವನಿಗೆ ತರಕಾರಿಗಳನ್ನು ಹಸ್ತಾಂತರಿಸುತ್ತಾನೆ. ಗ್ರೀನ್ ಬೆಲ್ಟ್ ಮತ್ತು ರೋಡ್ ಇನ್ಸ್ಟಿಟ್ಯೂಟ್ ಅಧ್ಯಕ್ಷ ಎರಿಕ್ ಸೋಲ್ಹೈಮ್ ಅವರು ಟ್ವಿಟ್ಟರ್ ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ 1 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ.

ಈಗ ವೈರಲ್ ಆಗಿರುವ ವಿಡಿಯೋದಲ್ಲಿ, ಕೆಲವು ಜನರು ಹೊಸದಾಗಿ ಬೆಳೆಸಿದ ಎಲೆಕೋಸುಗಳನ್ನು ಸಾಗಿಸಲು ಚೀಲಗಳಲ್ಲಿ ಪ್ಯಾಕ್ ಮಾಡಿದ್ದಾರೆ. ಪ್ರತಿಯೊಬ್ಬರ ಕಾರ್ಯವನ್ನು ಚೆನ್ನಾಗಿ ವಿಂಗಡಿಸಲಾಗಿದೆ. ಹಾಗೆಯೇ ಅವರು ಅದ್ಭುತ ಸಮನ್ವಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ರೋಬೋಟಿಕ್ ವೇಗ ಎಲ್ಲರನ್ನೂ ಬೆರಗುಗೊಳಿಸಿದೆ. ಇದಕ್ಕಾಗಿಯೇ ಭಾರತಕ್ಕೆ ರೋಬೋಟಿಕ್ ಆಟೊಮೇಷನ್ ಅಗತ್ಯವಿಲ್ಲ  ಎಂದು ವಿಡಿಯೋ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರನ್ನು ನಿಬ್ಬೆರಗಾಗಿಸಿದೆ.

— Erik Solheim (@ErikSolheim) May 16, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...