ಪಾಕಿಸ್ತಾನದ ಫೋನ್ ಸಂಖ್ಯೆಯಿಂದ ಮುಂಬೈ ಪೊಲೀಸರಿಗೆ ಕರೆ ಮಾಡಿರುವ ವ್ಯಕ್ತಿ 26/11 ದಾಳಿ ಪ್ರಕರಣ ಮರುಕಳಿಸಲಿದೆ ಎಂದು ಬೆದರಿಕೆ ಹಾಕಿರುವುದಲ್ಲದೆ, ಉದಯಪುರದ ಟೈಲರ್ ಕೊಲೆ ನಡೆದಂತೆ ಮತ್ತಷ್ಟು ಹತ್ಯೆಗಳು ನಡೆಯಲಿವೆ ಎಂದಿದ್ದಾನೆ.
ಮುಂಬೈ ಟ್ರಾಫಿಕ್ ಕಂಟ್ರೋಲ್ ಗೆ ವಾಟ್ಸಪ್ ನಂಬರ್ ಮೂಲಕ ಈ ಕರೆ ಬಂದಿದೆ ಎಂದು ಹೇಳಲಾಗಿದ್ದು, ಈ ಹಿನ್ನೆಲೆಯಲ್ಲಿ ಮುಂಬೈ ನಗರದಾದ್ಯಂತ ಎಚ್ಚರಿಕೆ ವಹಿಸಲಾಗಿದೆ.
ಆರು ಮಂದಿ ಈಗಾಗಲೇ ಭಾರತಕ್ಕೆ ಬಂದಿದ್ದು, ಮುಂದಿನ ದಿನಗಳಲ್ಲಿ ದಾಳಿ ಮಾಡಲಿದ್ದಾರೆ ಎಂದು ಕರೆ ಮಾಡಿದ ವ್ಯಕ್ತಿ ಬೆದರಿಕೆ ಒಡ್ಡಿದ್ದಾನೆ. ಈ ಬೆದರಿಕೆ ಕರೆ ಹಿಂದಿನ ಸತ್ಯಾಸತ್ಯತೆಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.