alex Certify ಹುಬ್ಬೇರಿಸುತ್ತೆ ಸ್ವಂತ ಮನೆಯನ್ನೇ ಈತ ಸುಟ್ಟು ಹಾಕಿರುವುದರ ಹಿಂದಿನ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಬ್ಬೇರಿಸುತ್ತೆ ಸ್ವಂತ ಮನೆಯನ್ನೇ ಈತ ಸುಟ್ಟು ಹಾಕಿರುವುದರ ಹಿಂದಿನ ಕಾರಣ

ಬ್ರಿಟನ್‌ನ ಪಿಂಚಣಿದಾರನೊಬ್ಬ ತನ್ನ ಮನೆಯನ್ನು ಬೇಕಂತಲೇ ಸುಟ್ಟು ಹಾಕಿದ್ದಾನೆ. 550,000 ಪೌಂಡ್ ಮೌಲ್ಯದ ಈ ಮನೆಯನ್ನು ಈತ ಸುಟ್ಟು ಹಾಕಿರುವ ಕಾರಣ ಕೇಳಿದರೆ ನಿಮ್ಮ ಹುಬ್ಬೇರಬಹುದು.

ಜಾನ್ ಮ್ಯಾಕ್‌ಕೊರ‍್ರಿ ಎಂಬ 75 ವರ್ಷ ವಯಸ್ಸಿನ ಈತ ಇಲ್ಲಿನ ಕೆನ್‌ಫೋರ್ಡ್‌ನಲ್ಲಿರುವ ಮನೆಯ ಮಾರಾಟದಿಂದ ಬಂದ ದುಡ್ಡನ್ನು ತನ್ನನ್ನು ಬಿಟ್ಟು ಹೋದ ಮಡದಿಗೆ ಕೊಡಬೇಕಾಗುತ್ತದೆ ಎಂಬ ಕಾರಣಕ್ಕೆ ಹೀಗೆ ಮಾಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಪ್ರವಾಸ ಪ್ರಿಯರಿಗೆ ಇಲ್ಲಿದೆ ‘ಗುಡ್ ನ್ಯೂಸ್’

ಮನೆ ಮಾರಾಟವಾಗಲು ಮೂರು ದಿನಗಳು ಇರುವಂತೆ ಮ್ಯಾಕ್‌ಕೊರ‍್ರಿ ತನ್ನ ಮನೆಯನ್ನು ಸುಟ್ಟುಹಾಕಿದ್ದಾನೆ. ಜೂನ್ 17ರ ರಾತ್ರಿ ಚೆನ್ನಾಗಿ ಕುಡಿದು ಬಂದು ಜಾನ್ ಹೀಗೆ ಮಾಡಿದ್ದಾನೆ. ಅದೇ ದಿನದಂದು, ತನ್ನ ಮಡದಿ ಆ ಮನೆಯಲ್ಲಿರುವ ಆಕೆಯ ವಸ್ತುಗಳನ್ನು ತೆಗೆದುಕೊಂಡು ಹೋಗುವುದಕ್ಕೆ ತಡೆಯೊಡ್ಡಿದ್ದ ಜಾನ್, ಮನೆಯ ವಿಮೆಯ ಕಂತುಗಳನ್ನು ಪಾವತಿ ಮಾಡದೇ ಇದ್ದ ಕಾರಣ ವಿಮೆಯೂ ಸಹ ಲ್ಯಾಪ್ಸ್‌ ಆಗಿದೆ.

ಗರ್ಭಾವಸ್ಥೆಯ ಮಧುಮೇಹದಿಂದ ತೂಕ ಏರಿಕೆಯಾಗುತ್ತಿದೆಯೇ…? ಸಮಸ್ಯೆ ಪರಿಹಾರಕ್ಕೆ ಇಲ್ಲಿದೆ ಮಾರ್ಗ

“ನಾನು ಆತನನ್ನು ಬಿಟ್ಟು ಹೋದ ಕಾರಣ ಸಿಟ್ಟಿಗೆದ್ದಿರುವ ಜಾನ್ ಹೀಗೆ ಮಾಡಿದ್ದಾನೆ” ಎಂದು ಆತನ ಪತ್ನಿ ಹಿಲರಿ ತಿಳಿಸಿದ್ದಾರೆ. “ನನಗೆ ವಿಚ್ಛೇದನ ಬೇಕಿರಲಿಲ್ಲ. ನಾನು ವಿಚ್ಛೇದನ ಕೇಳಿರಲಿಲ್ಲ. ನನಗೆ ಮನೆಯಿಂದ ಹೊರಗೆ ಹೋಗಲು ಇಷ್ಟವಿರಲಿಲ್ಲ. ಇವೆಲ್ಲಾ ಆಕೆಯಿಂದಲೇ ಆಗಿರುವುದು. ನನಗೆ ಸಿಟ್ಟು ಬಂದಿರಲಿಲ್ಲ, ಹತಾಶೆಯಾಗಿತ್ತು” ಎಂದು ಮ್ಯಾಕ್‌ಕೊರ‍್ರಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...