ಡೇಟಿಂಗ್ ಸಂಗಾತಿಗಳನ್ನು ಹುಡುಕುತ್ತಾ ಟಿಂಡರ್‌ನಲ್ಲಿ ತಮ್ಮನ್ನು ತಾವು ಪರಿಚಯಿಸಿಕೊಳ್ಳಲು ನೆಟ್ಟಿಗರು ಏನೆಲ್ಲಾ ಕಸರತ್ತು ಮಾಡುತ್ತಾರೆ. ಪೋರ್ಟಲ್‌ನಲ್ಲಿ ಸಂಗಾತಿಗಳನ್ನು ಹುಡುಕುವ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ ಎಂಬ ಗ್ಯಾರಂಟಿ ಇರುವುದಿಲ್ಲ. ಆದರೂ ನಾವು ಭರವಸೆ ಇಟ್ಟುಕೊಂಡು ಸರ್ಚ್ ಮಾಡುತ್ತೇವೆ ಅಷ್ಟೇ.
ತನ್ನ ಡೇಟಿಂಗ್ ಸಂಗಾತಿಯೊಬ್ಬ ಆತನ ತಾಯಿಯನ್ನು ಪರಿಚಯಿಸಿಕೊಳ್ಳಲು ಆಯ್ದುಕೊಂಡ ವಿಚಿತ್ರ ರೀತಿಯ ಬಗ್ಗೆ ಮಹಿಳೆಯೊಬ್ಬಳು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾಳೆ.
ಜಮ್ಮು & ಕಾಶ್ಮೀರ ಪ್ರವಾಸದಲ್ಲಿ ರಾಹುಲ್: ದುರ್ಗಾ ಮಾತೆ ದರ್ಶನ ಪಡೆದ ‘ರಾಗಾ’
ಟಿಂಡರ್ ಅಪ್ಲಿಕೇಶನ್‌ನಲ್ಲಿ ಈತನನ್ನು ಭೇಟಿ ಮಾಡಿದ ಬಳಿಕ ತನ್ನ ಮನೆಯಲ್ಲಿ ಬಾರ್ಬೆಕ್ಯೂ ಅಟೆಂಡ್ ಮಾಡಲು ಈ ಮಹಿಳೆ ಆತನನ್ನು ಕರೆದಿದ್ದಾಳೆ. ಇದಕ್ಕೆ ಪ್ರತಿಕ್ರಿಯಿಸಿ ಆಕೆಯ ಮನೆಗೆ ಹೋದ ಆತ ತನ್ನ ತಾಯಿಯನ್ನು ಪರಿಚಯಿಸಲು ಆಕೆಯ ಚಿತಾಭಸ್ಮವಿದ್ದ ಚೊಂಬನ್ನು ತೆಗೆದುಕೊಂಡು ಹೋಗಿದ್ದಾನೆ.
“ನಿನ್ನನ್ನು ನನ್ನ ತಾಯಿಗೆ ಪರಿಚಯಿಸಲು ಇಷ್ಟ ಪಡುತ್ತೇನೆ,” ಎನ್ನತ್ತಲೇ ಚಿತಾಭಸ್ಮದ ಚೊಂಬನ್ನು ಹೊರತೆಗೆದ ಆತನನ್ನು ಕಂಡು ದಂಗುಬಡಿದ ಮಹಿಳೆ ಈ ಡೇಟಿಂಗ್ ಪ್ರಪೋಸಲ್‌ಗೆ ಗುಡ್‌ಬೈ ಹೇಳಿದ್ದಾಳೆ.
“ನಾನೂ ಸಹ ನನಗೆ ಹತ್ತಿರವಾದ ಬಹಳಷ್ಟು ಮಂದಿಯನ್ನು ಕಳೆದುಕೊಂಡಿದ್ದೇನೆ. ಜನರನ್ನು ಅವರ ಶೋಕದ ಹಿನ್ನೆಲೆಯ ಮೇಲೆ ನಾನು ಜಡ್ಜ್ ಮಾಡುವುದಿಲ್ಲ. ನಾವೆಲ್ಲಾ ನಮ್ಮ ನಮ್ಮ ನೋವುಗಳನ್ನು ಬೇರೆ ಬೇರೆ ರೀತಿಗಳಲ್ಲಿ ನಿಭಾಯಿಸುತ್ತೇವೆ, ನಾನು ಅದನ್ನು ಗೌರವಿಸುತ್ತೇನೆ. ಆದರೆ ಈತ ತನ್ನ ತಾಯಿಯ ಚಿತಾಭಸ್ಮವನ್ನು ನಮ್ಮ ಮೊದಲ ಡೇಟ್ ಟೇಬಲ್ ಮೇಲೆ ತಂದು ಇಟ್ಟಿದ್ದಾನೆ,” ಎಂದು ಮಹಿಳೆ ಹೇಳಿಕೊಂಡಿದ್ದಾಳೆ.