alex Certify ಸಂಬಳದ ಮಾತುಕತೆಗಾಗಿ ತಾಯಿಯನ್ನು ಕರೆತರಬಹುದೇ ಎಂದ ಟೆಕ್ಕಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಬಳದ ಮಾತುಕತೆಗಾಗಿ ತಾಯಿಯನ್ನು ಕರೆತರಬಹುದೇ ಎಂದ ಟೆಕ್ಕಿ..!

ಶಾಲಾ ದಿನಗಳಲ್ಲಿ ಪೋಷಕರ ಸಭೆ ಇದ್ದರೆ ಬಹುತೇಕರು ತಮ್ಮ ತಂದೆಯ ಬದಲಿಗೆ ತಾಯಿಯನ್ನು ಕರೆತರುತ್ತಾರೆ. ಯಾವುದೇ ಸಮಸ್ಯೆಗೆ ತಾಯಿಯನ್ನು ಕರೆತಂದರೆ ಬಹುಶಃ ಆ ಸಮಸ್ಯೆಯು ಪರಿಹರಿಸಲ್ಪಡಬಹುದು. ಇದೀಗ ನಿತೇಶ್ ಯಾದವ್ ಎಂಬ ಟೆಕ್ಕಿಯೊಬ್ಬರು ಕೂಡ ಮಾಡಿದ್ದು ಇದನ್ನೇ.

ಹೌದು, ಲಿಂಕ್ಡ್‌ಇನ್‌ನಲ್ಲಿನ ಪೋಸ್ಟ್‌ನಲ್ಲಿ ಅವರು, ತಮ್ಮ ತಾಯಿಯನ್ನು ಸಂಬಳದ ಮಾತುಕತೆಗೆ ಕರೆಗೆ ಕರೆತರಬಹುದೇ ಎಂದು ಕೇಳಿಕೊಂಡಿದ್ದಾರೆ. ಅವರ ಪೋಸ್ಟ್ ವೈರಲ್ ಆಗಿದ್ದು, ನೆಟ್ಟಿಗರಿಂದ ಪ್ರತಿಕ್ರಿಯೆಗಳ ಅಲೆಯೇ ಉಂಟಾಯಿತು.

ಸಂಬಳದ ಮಾತುಕತೆಗಾಗಿ ಎಚ್‌ಆರ್‌ ಅವರೊಂದಿಗೆ ಚರ್ಚಿಸುವುದು ಕೆಲವರಿಗೆ ಹಿಂಸೆ ಎಂದೆನಿಸಬಹುದು. ಈ ಆತಂಕವನ್ನು ಹೋಗಲಾಡಿಸಲು ನಿತೇಶ್ ಅದ್ಭುತ ಉಪಾಯವನ್ನು ಯೋಚಿಸಿದ್ರು. ಪೋಸ್ಟ್‌ನಲ್ಲಿ, ಅವರು ತಮ್ಮ ತಾಯಿಯು ಈ ಬಗ್ಗೆ ಮಾತನಾಡಬಹುದೇ ಎಂದು ಕೇಳಿದ್ದಾರೆ. ಏಕೆಂದರೆ ಅವರು ಖಂಡಿತವಾಗಿಯೂ ಉತ್ತಮ ವ್ಯವಹಾರವನ್ನು ಮಾಡುತ್ತಾರೆ ಎಂಬ ಉದ್ದೇಶದಿಂದ ಟೆಕ್ಕಿ ಈ ರೀತಿ ಕೇಳಿಕೊಂಡಿದ್ದಾರೆ.

ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ವಿಭಾಗದಲ್ಲಿ ದಾಳಿಯನ್ನೇ ಮಾಡಿದ್ದಾರೆ. ಕೆಲವರು ಇದನ್ನು ತಮಾಷೆಯಾಗಿ ಕಂಡಿದ್ದಾರೆ. ಒಂದು ವೇಳೆ ತನ್ನ ತಾಯಿ ಮಾತುಕತೆ ನಡೆಸಲು ಪ್ರಾರಂಭಿಸಿದ್ರೆ ಎಚ್ಆರ್ ಖಂಡಿತವಾಗಿಯೂ ಮೂರ್ಛೆ ಹೋಗುತ್ತಾರೆ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...