alex Certify ಮತ್ತೊಮ್ಮೆ ಭೇಟಿಯಾಗಲು ನಿರಾಕರಿಸಿದ ಯುವತಿ ಬಳಿ ಕಾಫಿಗೆ ನೀಡಿದ್ದ ಹಣಕ್ಕೆ ಬೇಡಿಕೆ ಇಟ್ಟ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಮ್ಮೆ ಭೇಟಿಯಾಗಲು ನಿರಾಕರಿಸಿದ ಯುವತಿ ಬಳಿ ಕಾಫಿಗೆ ನೀಡಿದ್ದ ಹಣಕ್ಕೆ ಬೇಡಿಕೆ ಇಟ್ಟ ಭೂಪ…!

ಮಹಿಳೆಯೊಬ್ಬರು ತಾನು ಒಮ್ಮೆ ಡೇಟಿಂಗ್‌ಗೆ ಹೋದ ವ್ಯಕ್ತಿಯನ್ನು ಮತ್ತೆ ಭೇಟಿಯಾಗಲು ನಿರಾಕರಿಸಿದ ನಂತರ, ಆತ ಕಾಫಿಯ ಹಣವನ್ನು ಮರುಪಾವತಿ ಮಾಡುವಂತೆ ಕೇಳಿಕೊಂಡ ಎಂಬ ಬಗ್ಗೆ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಸುಮಾರು ಆರು ವರ್ಷಗಳ ಹಿಂದೆ ಈ ಘಟನೆ ನಡೆದಿದೆ ಎಂದು ಲಾರೆನ್ ಹೇಳಿದ್ದಾರೆ. ಒಬ್ಬ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡಿದ್ದರಂತೆ. ಮತ್ತೊಮ್ಮೆ ಭೇಟಿಯಾಗೋಣ ಎಂಬುದಾಗಿ ಲಾರೆನ್ ಳನ್ನು ಆ ವ್ಯಕ್ತಿ ಕೇಳಿದ್ದಾನೆ. ಅಲ್ಲದೆ ತನ್ನ ಮನೆಯಲ್ಲೇ ಡಿನ್ನರ್ ಗೆ ಅರೇಂಜ್ ಮಾಡುವುದಾಗಿಯೂ ಹೇಳಿದ್ದಾನೆ. ಇದನ್ನು ನಯವಾಗಿ ತಿರಸ್ಕರಿಸಿದ ಲಾರೆನ್ ತಾನು ಯಾರ ಮನೆಗೂ ಡಿನ್ನರ್ ಗೆ ಹಾಗೆಲ್ಲಾ ತೆರಳುವುದಿಲ್ಲ ಎಂದು ಹೇಳಿದ್ದಾರೆ.

ಯೋಧರಿಂದ ಮಹಿಳೆಯರಿಗೆ ಕಿರಿಕಿರಿ: ಟಿಎಂಸಿ ಶಾಸಕನ ವಿವಾದಾತ್ಮಕ ಹೇಳಿಕೆ

ಲಾರೆನ್ ಮಾತಿಗೆ ಕುಪಿತಗೊಂಡ ಆ ವ್ಯಕ್ತಿ, ಮೊದಲ ಬಾರಿ ಭೇಟಿಯಾಗಿದ್ದಾಗ ಕಾಫಿಗೆ ಕೊಟ್ಟಿದ್ದ 350 ರೂ.ಗಳನ್ನು ವಾಪಸ್ ಮಾಡುವಂತೆ ಕೇಳಿದ್ದಾನೆ. ಇದಕ್ಕೆ ಲಾರೆನ್, ಸರಿ ಹಣ ವಾಪಸ್ ಮಾಡುತ್ತೇನೆ. ಆದರೆ ಚಾರಿಟಿಗೆ ದಾನ ಮಾಡುವುದಾಗಿ ಹೇಳಿದ್ದಾಳೆ. ಇದಕ್ಕೊಪ್ಪದ ಆತ, ಆ ಹಣವನ್ನು ಏನು ಮಾಡಬೇಕೆಂದು ತಾನೇ ನಿರ್ಧರಿಸುತ್ತೇನೆ, ತನ್ನ ಅಕೌಂಟ್ ಗೆ ಹಣ ಹಾಕಿ ಎಂದು ಬ್ಯಾಂಕ್ ವಿವರಗಳನ್ನು ಕಳುಹಿಸಿದ್ದಾನೆ.

ಇವರಿಬ್ಬರ ನಡುವಿನ ಸಂಭಾಷಣೆಯ ಸ್ಕ್ರೀನ್ ಶಾಟ್ ಅನ್ನು ಲಾರೆನ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಟ್ವೀಟ್ ಸದ್ಯ ಭಾರಿ ವೈರಲ್ ಆಗಿದ್ದು, ಪರಿಸ್ಥಿತಿಯನ್ನು ಲಾರೆನ್ ಬಹಳ ಚೆನ್ನಾಗಿ ನಿಭಾಯಿಸಿದ್ದಾರೆ ಅಂತೆಲ್ಲಾ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

— Me, you, Tokyo (@LaurenNotLozza) November 12, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...