
ಸುಮಾರು ಆರು ವರ್ಷಗಳ ಹಿಂದೆ ಈ ಘಟನೆ ನಡೆದಿದೆ ಎಂದು ಲಾರೆನ್ ಹೇಳಿದ್ದಾರೆ. ಒಬ್ಬ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡಿದ್ದರಂತೆ. ಮತ್ತೊಮ್ಮೆ ಭೇಟಿಯಾಗೋಣ ಎಂಬುದಾಗಿ ಲಾರೆನ್ ಳನ್ನು ಆ ವ್ಯಕ್ತಿ ಕೇಳಿದ್ದಾನೆ. ಅಲ್ಲದೆ ತನ್ನ ಮನೆಯಲ್ಲೇ ಡಿನ್ನರ್ ಗೆ ಅರೇಂಜ್ ಮಾಡುವುದಾಗಿಯೂ ಹೇಳಿದ್ದಾನೆ. ಇದನ್ನು ನಯವಾಗಿ ತಿರಸ್ಕರಿಸಿದ ಲಾರೆನ್ ತಾನು ಯಾರ ಮನೆಗೂ ಡಿನ್ನರ್ ಗೆ ಹಾಗೆಲ್ಲಾ ತೆರಳುವುದಿಲ್ಲ ಎಂದು ಹೇಳಿದ್ದಾರೆ.
ಯೋಧರಿಂದ ಮಹಿಳೆಯರಿಗೆ ಕಿರಿಕಿರಿ: ಟಿಎಂಸಿ ಶಾಸಕನ ವಿವಾದಾತ್ಮಕ ಹೇಳಿಕೆ
ಲಾರೆನ್ ಮಾತಿಗೆ ಕುಪಿತಗೊಂಡ ಆ ವ್ಯಕ್ತಿ, ಮೊದಲ ಬಾರಿ ಭೇಟಿಯಾಗಿದ್ದಾಗ ಕಾಫಿಗೆ ಕೊಟ್ಟಿದ್ದ 350 ರೂ.ಗಳನ್ನು ವಾಪಸ್ ಮಾಡುವಂತೆ ಕೇಳಿದ್ದಾನೆ. ಇದಕ್ಕೆ ಲಾರೆನ್, ಸರಿ ಹಣ ವಾಪಸ್ ಮಾಡುತ್ತೇನೆ. ಆದರೆ ಚಾರಿಟಿಗೆ ದಾನ ಮಾಡುವುದಾಗಿ ಹೇಳಿದ್ದಾಳೆ. ಇದಕ್ಕೊಪ್ಪದ ಆತ, ಆ ಹಣವನ್ನು ಏನು ಮಾಡಬೇಕೆಂದು ತಾನೇ ನಿರ್ಧರಿಸುತ್ತೇನೆ, ತನ್ನ ಅಕೌಂಟ್ ಗೆ ಹಣ ಹಾಕಿ ಎಂದು ಬ್ಯಾಂಕ್ ವಿವರಗಳನ್ನು ಕಳುಹಿಸಿದ್ದಾನೆ.
ಇವರಿಬ್ಬರ ನಡುವಿನ ಸಂಭಾಷಣೆಯ ಸ್ಕ್ರೀನ್ ಶಾಟ್ ಅನ್ನು ಲಾರೆನ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಟ್ವೀಟ್ ಸದ್ಯ ಭಾರಿ ವೈರಲ್ ಆಗಿದ್ದು, ಪರಿಸ್ಥಿತಿಯನ್ನು ಲಾರೆನ್ ಬಹಳ ಚೆನ್ನಾಗಿ ನಿಭಾಯಿಸಿದ್ದಾರೆ ಅಂತೆಲ್ಲಾ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.