ದಕ್ಷಿಣ ಭಾರತದಲ್ಲಿ ಮಾಳವಿಕಾ ಮೋಹನನ್ ಅವರಿಗೆ ದೊಡ್ಡ ಮಟ್ಟದ ಬೇಡಿಕೆ ಇದೆ. ಮಾಸ್ಟರ್ ಸಿನಿಮಾದಲ್ಲಿ ದಳಪತಿ ವಿಜಯ್ ಜೊತೆ ತೆರೆ ಹಂಚಿಕೊಳ್ಳುವ ಮೂಲಕ ಅವರ ಖ್ಯಾತಿ ಹೆಚ್ಚಿದೆ.
2016ರಲ್ಲಿ ತೆರೆಕಂಡ ಕನ್ನಡದ ನಾನು ಮತ್ತು ವರಲಕ್ಷ್ಮೀ ಸಿನಿಮಾದಲ್ಲಿಯೂ ಅವರು ನಟಿಸಿದ್ದಾರೆ. ವಿಶ್ವವಿಖ್ಯಾತ ನಿರ್ದೇಶಕ ಮಜಿದ್ ಮಜಿದಿ ನಿರ್ದೇಶನ ಮಾಡಿದ್ದ ಬಿಯಾಂಡ್ ದಿ ಕ್ಲೌಡ್ಸ್ ಸೀರಿಸ್ನಲ್ಲಿ ಅಭಿನಯಿಸುವ ಅವಕಾಶ ಪಡೆದಿದ್ದರು ಮಾಳವಿಕ. ಇಷ್ಟೆಲ್ಲ ಜನಪ್ರಿಯತೆ ಇರುವ ನಟಿಗೆ ಈಗ ಎಡಿಟೆಡ್ ಫೋಟೋದಿಂದ ಕಿರಿಕಿರಿ ಆಗಿದೆ.
ಹೌದು ಮಾಳವಿಕ ಮೋಹನನ್ ಅವ್ರ ಫೋಟೊವನ್ನ ಕೆಲ ಕಿಡಿಗೇಡಿಗಳು ಅಶ್ಲೀಲವಾಗಿ ಎಡಿಟ್ ಮಾಡಿದ್ದಾರಂತೆ. ತಮ್ಮ ಫೋಟೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿದವರಿಗೆ ಮಾಳವಿಕಾ, ತಮ್ಮದೇ ದಾಟಿಯಲ್ಲಿ ಛೀಮಾರಿ ಹಾಕಿದ್ದಾರೆ. ಈ ಕುರಿತು ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಕೋಟ್ಯಾಂತರ ರೂ. ಆಸ್ತಿಯ ಒಡತಿ ಶಿಲ್ಪಾ ಶೆಟ್ಟಿ…! ಪತ್ನಿ ಹೆಸರಿಗೆ 38.5 ಕೋಟಿ ಮೌಲ್ಯದ ಪ್ಲಾಟ್ ಗಳನ್ನ ವರ್ಗಾವಣೆ ಮಾಡಿದ ರಾಜ್ ಕುಂದ್ರಾ
ಒರಿಜಿನಲ್ ಫೋಟೋವನ್ನು ಸಾಕ್ಷಿಯಾಗಿ ಇಟ್ಟುಕೊಂಡು ಅವರು ತಮ್ಮ ಮಾತನ್ನು ಸಾಬೀತುಪಡಿಸಿದ್ದಾರೆ. ಕೆಲವೇ ತಿಂಗಳ ಹಿಂದೆ ತೆಗೆದ ಫೋಟೋ ಇದು. ಇದನ್ನು ಬಳಸಿಕೊಂಡು ಯಾರೋ ಅಶ್ಲೀಲವಾಗಿ ಎಡಿಟ್ ಮಾಡಿದ್ದಾರೆ. ಕೆಲವು ಮಾಧ್ಯಮಗಳೂ ಸೇರಿದಂತೆ ಅನೇಕರು ಅಶ್ಲೀಲ ಫೋಟೋವನ್ನು ವೈರಲ್ ಮಾಡುತ್ತಿದ್ದಾರೆ. ಅದು ಸರಿಯಲ್ಲ. ನಿಮಗೆ ಫೇಕ್ ಫೋಟೋ ಕಾಣಿಸಿದರೆ ಅದನ್ನು ರಿಪೋರ್ಟ್ ಮಾಡಿ ಎಂದು ಮಾಳವಿಕಾ ಮೋಹನನ್ ತಮ್ಮ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.