alex Certify ತಮ್ಮ ಉಡುಪಿನ ಕಾರಣಕ್ಕೆ ಟ್ರೋಲಿಗರ ಬಾಯಿಗೆ ಆಹಾರವಾದ ಮಲೈಕಾ ಅರೋರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಮ್ಮ ಉಡುಪಿನ ಕಾರಣಕ್ಕೆ ಟ್ರೋಲಿಗರ ಬಾಯಿಗೆ ಆಹಾರವಾದ ಮಲೈಕಾ ಅರೋರಾ

ಅರ್ಜುನ್​ ಕಪೂರ್​ ಜೊತೆಗಿನ ತಮ್ಮ ರಿಲೇಷನ್​ಶಿಪ್​ ಕಾರಣಕ್ಕೆ ಪದೇ ಪದೇ ಸುದ್ದಿಯಾಗುತ್ತಲೇ ಇರುವ ಬಾಲಿವುಡ್​ ನಟಿ ಮಲೈಕಾ ಅರೋರಾ ಇದೀಗ ತಮ್ಮ ಉಡುಪಿನ ಕಾರಣಕ್ಕಾಗಿ ಮತ್ತೊಮ್ಮೆ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ.

ಮುಂಬೈನಲ್ಲಿ ಇತ್ತೀಚೆಗಷ್ಟೇ ನಡೆದ ಫೆಮಿನಾ ಮಿಸ್ ಇಂಡಿಯಾ 2022ರ ಕಾರ್ಯಕ್ರಮದಲ್ಲಿ ನಟಿ ಮಲೈಕಾ ಅರೋರಾ ಧರಿಸಿರುವ ಉಡುಪು ಇದೀಗ ಟಾಕ್​ ಆಫ್​ ದಿ ಟೌನ್​ ಆಗಿದೆ.

ಈ ಕಾರ್ಯಕ್ರಮದಲ್ಲಿ ಮಲೈಕಾ ಅರೋರಾ ಜೊತೆಯಲ್ಲಿ ಡಿನೋ ಮೋರಿಯಾ ಹಾಗೂ ನೇಹಾ ಧೂಪಿಯಾ ಕೂಡ ಜ್ಯೂರಿ ಮೆಂಬರ್​ಗಳಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಲೈಕಾ ಅರೋರಾ ಸೆಲೆಬ್ರಿಟಿ ಡಿಸೈನರ್ ಮೇನಕಾ ಹರಿ ಸಿಂಘಾನಿ ಧರಿಸಿದ್ದ ಉಡುಪನ್ನು ಧರಿಸಿ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ಉಡುಪಿನ ಮೂಲಕ ಮಲೈಕಾ ಅಮೆರಿಕನ್​ ಮಾಡೆಲ್​ ಕಿಮ್​ ಕಾರ್ಡಶಿಯಾನ್​​ರನ್ನು ಕಾಪಿ ಮಾಡ್ತಿದ್ದಾರೆ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.

SHOCKING NEWS: 40 ಸೆಕೆಂಡ್ ನಲ್ಲಿ 30ಕ್ಕೂ ಹೆಚ್ಚು ಬಾರಿ ಚುಚ್ಚಿದ ದುಷ್ಕರ್ಮಿ; ಚಂದ್ರಶೇಖರ್ ಗುರೂಜಿ ಬರ್ಬರ ಹತ್ಯೆ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಡೀಪ್​ ನೆಕ್​ಲೈನ್​​ ಇರುವ ಸಿ ಥ್ರೂ ಗೌನ್​ ಇದಾಗಿದೆ. ಸಂಪೂರ್ಣ ಪಾರದರ್ಶಕವಾದ ಈ ಗೌನ್​​ನಲ್ಲಿ ನಟಿಯ ಒಳ ಉಡುಪುಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದವು. ಕತ್ತಿಗೆ ಚೋಕರ್​ ಹಾಗೂ ಅತ್ಯಂತ ಸರಳ ಕೇಶ ವಿನ್ಯಾಸ ಮಾಡಿಕೊಂಡಿದ್ದ ನಟಿ ಮಲೈಕಾ ಹೈ ಹೀಲ್ಡ್​ ಚಪ್ಪಲಿ ಧರಿಸಿದ್ದರು. ಬಂಗಾರ ಬಣ್ಣದ ಉಡುಪಿನಲ್ಲಿ ಕಂಗೊಳಿಸುತ್ತಿದ್ದ ಮಲೈಕಾರನ್ನು ಕಂಡ ನೆಟ್ಟಿಗರು ತರಹೇವಾರಿ ರೀತಿಯಲ್ಲಿ ಟ್ರೋಲ್​ ಮಾಡಿದ್ದಾರೆ. ಕೆಲವರು ಇದು ಕಿಮ್​ ಕಾರ್ಡಶಿಯಾನ್​ ಕಾಪಿ ಎಂದರೆ ಇನ್ನೂ ಹಲವರು ಈ ಪಾರದರ್ಶಕ ಉಡುಪು ಧರಿಸುವ ಅವಶ್ಯಕತೆಯಾದರೂ ಏನಿತ್ತು..? ಹಾಗೆಯೇ ಒಳ ಉಡುಪು ಧರಿಸಿ ಬರಬಹುದಿತ್ತಲ್ಲವೇ ಎಂದು ಅಣಕಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...