ಅರ್ಜುನ್ ಕಪೂರ್ ಜೊತೆಗಿನ ತಮ್ಮ ರಿಲೇಷನ್ಶಿಪ್ ಕಾರಣಕ್ಕೆ ಪದೇ ಪದೇ ಸುದ್ದಿಯಾಗುತ್ತಲೇ ಇರುವ ಬಾಲಿವುಡ್ ನಟಿ ಮಲೈಕಾ ಅರೋರಾ ಇದೀಗ ತಮ್ಮ ಉಡುಪಿನ ಕಾರಣಕ್ಕಾಗಿ ಮತ್ತೊಮ್ಮೆ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ.
ಮುಂಬೈನಲ್ಲಿ ಇತ್ತೀಚೆಗಷ್ಟೇ ನಡೆದ ಫೆಮಿನಾ ಮಿಸ್ ಇಂಡಿಯಾ 2022ರ ಕಾರ್ಯಕ್ರಮದಲ್ಲಿ ನಟಿ ಮಲೈಕಾ ಅರೋರಾ ಧರಿಸಿರುವ ಉಡುಪು ಇದೀಗ ಟಾಕ್ ಆಫ್ ದಿ ಟೌನ್ ಆಗಿದೆ.
ಈ ಕಾರ್ಯಕ್ರಮದಲ್ಲಿ ಮಲೈಕಾ ಅರೋರಾ ಜೊತೆಯಲ್ಲಿ ಡಿನೋ ಮೋರಿಯಾ ಹಾಗೂ ನೇಹಾ ಧೂಪಿಯಾ ಕೂಡ ಜ್ಯೂರಿ ಮೆಂಬರ್ಗಳಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಲೈಕಾ ಅರೋರಾ ಸೆಲೆಬ್ರಿಟಿ ಡಿಸೈನರ್ ಮೇನಕಾ ಹರಿ ಸಿಂಘಾನಿ ಧರಿಸಿದ್ದ ಉಡುಪನ್ನು ಧರಿಸಿ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ಉಡುಪಿನ ಮೂಲಕ ಮಲೈಕಾ ಅಮೆರಿಕನ್ ಮಾಡೆಲ್ ಕಿಮ್ ಕಾರ್ಡಶಿಯಾನ್ರನ್ನು ಕಾಪಿ ಮಾಡ್ತಿದ್ದಾರೆ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.
SHOCKING NEWS: 40 ಸೆಕೆಂಡ್ ನಲ್ಲಿ 30ಕ್ಕೂ ಹೆಚ್ಚು ಬಾರಿ ಚುಚ್ಚಿದ ದುಷ್ಕರ್ಮಿ; ಚಂದ್ರಶೇಖರ್ ಗುರೂಜಿ ಬರ್ಬರ ಹತ್ಯೆ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ
ಡೀಪ್ ನೆಕ್ಲೈನ್ ಇರುವ ಸಿ ಥ್ರೂ ಗೌನ್ ಇದಾಗಿದೆ. ಸಂಪೂರ್ಣ ಪಾರದರ್ಶಕವಾದ ಈ ಗೌನ್ನಲ್ಲಿ ನಟಿಯ ಒಳ ಉಡುಪುಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದವು. ಕತ್ತಿಗೆ ಚೋಕರ್ ಹಾಗೂ ಅತ್ಯಂತ ಸರಳ ಕೇಶ ವಿನ್ಯಾಸ ಮಾಡಿಕೊಂಡಿದ್ದ ನಟಿ ಮಲೈಕಾ ಹೈ ಹೀಲ್ಡ್ ಚಪ್ಪಲಿ ಧರಿಸಿದ್ದರು. ಬಂಗಾರ ಬಣ್ಣದ ಉಡುಪಿನಲ್ಲಿ ಕಂಗೊಳಿಸುತ್ತಿದ್ದ ಮಲೈಕಾರನ್ನು ಕಂಡ ನೆಟ್ಟಿಗರು ತರಹೇವಾರಿ ರೀತಿಯಲ್ಲಿ ಟ್ರೋಲ್ ಮಾಡಿದ್ದಾರೆ. ಕೆಲವರು ಇದು ಕಿಮ್ ಕಾರ್ಡಶಿಯಾನ್ ಕಾಪಿ ಎಂದರೆ ಇನ್ನೂ ಹಲವರು ಈ ಪಾರದರ್ಶಕ ಉಡುಪು ಧರಿಸುವ ಅವಶ್ಯಕತೆಯಾದರೂ ಏನಿತ್ತು..? ಹಾಗೆಯೇ ಒಳ ಉಡುಪು ಧರಿಸಿ ಬರಬಹುದಿತ್ತಲ್ಲವೇ ಎಂದು ಅಣಕಿಸಿದ್ದಾರೆ.