ಬಿ ಟೌನ್ನ ಹಾಟೆಸ್ಟ್ ಜೋಡಿಗಳಲ್ಲಿ ಒಬ್ಬರಾದ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಯಾವುದೇ ಸಂದರ್ಶನಗಳಲ್ಲಿ ತಮ್ಮ ಸಂಬಂಧದ ಬಗ್ಗೆ ಒಳ್ಳೆಯದನ್ನೇ ಹೇಳಿಕೊಳ್ಳುತ್ತಾರೆ. ಅಲ್ಲದೆ ಜೊತೆಯಾಗಿ ಕ್ಲಿಕ್ಕಿಸಿಕೊಂಡ ಸಾಕಷ್ಟು ಫೋಟೋಗಳನ್ನು ಈ ಲವ್ ಬರ್ಡ್ಸ್ ಶೇರ್ ಕೂಡ ಮಾಡ್ತಾರೆ. 1998ರಲ್ಲಿ ಅರ್ಬಾಜ್ ಖಾನ್ರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ನಟಿ ಮಲೈಕಾ 2017ರಲ್ಲಿ ವಿಚ್ಛೇದನ ಪಡೆದಿದ್ದರು.
ಚಾಲಕನ ಬಳಿ ಡಿಎಲ್ ಇಲ್ಲದಿದ್ದರೂ ವಿಮೆ ಕಂಪನಿ ಪರಿಹಾರ ಪಾವತಿಸಿ ಬಳಿಕ ವಾಹನ ಮಾಲೀಕನಿಂದ ವಸೂಲಿ ಮಾಡಬೇಕು: ಅಪಘಾತ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ
ಇತ್ತೀಚಿನ ಸಂದರ್ಶನವೊಂದರಲ್ಲಿ ಮಲೈಕಾ ವಿಚ್ಛೇದನದ ನಂತರದ ಜೀವನದ ಬಗ್ಗೆ ಮಾತನಾಡಿದ್ದಾರೆ. ನಿಮಗಿಂತ ಕಿರಿಯರ ಜೊತೆಗೆ ಡೇಟಿಂಗ್ ಮಾಡಿದರೆ ಅಂತಹ ಮಹಿಳೆಯರನ್ನು ಭಾರತೀಯ ಸಮಾಜವು ಅಪರಾಧಿ ಎಂಬಂತೆ ನೋಡುತ್ತದೆ. ಮಲೈಕಾ 48 ವರ್ಷ ಪ್ರಾಯದವರಾಗಿದ್ದು ಅರ್ಜುನ್ ಕಪೂರ್ 36ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಇವರಿಬ್ಬರ ನಡುವಿನ ವಯಸ್ಸಿನ ಅಂತರದ ಕಾರಣಕ್ಕೆ ಪದೇ ಪದೇ ಟ್ರೋಲ್ ಆಗ್ತಾನೇ ಇರ್ತಾರೆ.
ಬ್ರೇಕಪ್ ಅಥವಾ ವಿಚ್ಛೇದನದ ಬಳಿಕ ಮಹಿಳೆಯರು ಉತ್ತಮ ಜೀವನವನ್ನು ಹೊಂದುವುದು ಅತ್ಯಂತ ಮುಖ್ಯವಾಗಿದೆ. ಸಾಮಾನ್ಯವಾಗಿ ಮಹಿಳೆಯರು ತನಗಿಂತ ಕಿರಿಯ ವಯಸ್ಸಿನವನ ಜೊತೆಯಲ್ಲಿ ಡೇಟಿಂಗ್ ಮಾಡಿದರೆ ಅದನ್ನು ಮಹಿಳೆಯರ ಕುಲಕ್ಕೆ ಮಾಡಿದ ಅಪಚಾರ ಎಂದೇ ಭಾವಿಸುತ್ತಾರೆ ಎಂದು ಮಲೈಕಾ ಹೇಳಿದ್ದಾರೆ.