ಅರಶಿನವನ್ನು ಅಡುಗೆಯಲ್ಲಿ ಬಳಸುತ್ತಾರೆ. ಮಾತ್ರವಲ್ಲ ಅರಶಿನದಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳಿರುವ ಕಾರಣ ಆಯುರ್ವೇದದ ಹಲವು ಔಷಧಿಗಳ ತಯಾರಿಕೆಯಲ್ಲಿ ಇದನ್ನು ಬಳಸುತ್ತಾರೆ. ಹಾಗಾಗಿ ಹಲವು ರೋಗಗಳಿಗೆ ರಾಮಬಾಣವಾಗಿದೆ. ಈ ಅರಶಿನದಿಂದ ತಲೆನೋವನ್ನು ನಿವಾರಿಸಿಕೊಳ್ಳಬಹುದು. ಅದು ಹೇಗೆ ಎಂಬುದನ್ನು ತಿಳಿಯೋಣ.
*ಅರಿಶಿನವು ಆ್ಯಂಟಿ ಬ್ಯಾಕ್ಟೀರಿಯಲ್, ಆ್ಯಂಟಿ ಬಯೋಟಿಕ್, ಆ್ಯಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿದ್ದು, ಇದು ತಲೆನೋವನ್ನು ನಿವಾರಿಸುವ ಗುಣಗಳನ್ನು ಹೊಂದಿದೆ. ಸ್ವಲ್ಪ ಅರಶಿನ ಪುಡಿಗೆ ಸ್ವಲ್ಪ ಕರಿಮೆಣಸಿನ ಪುಡಿ ಮತ್ತು ಜೇನುತುಪ್ಪ ಮಿಕ್ಸ್ ಮಾಡಿ ಸೇವಿಸಿ. ಇದರಿಂದ ತಲೆನೋವು ತಕ್ಷಣ ಮಾಯವಾಗುತ್ತದೆ.
*ಹತ್ತಿಗೆ ಸ್ವಲ್ಪ ಅರಶಿನ ಹಾಕಿ ಚೆನ್ನಾಗಿ ಹರಡಿ ಅದಕ್ಕೆ ಸ್ವಲ್ಪ ಏಲಕ್ಕಿ ಬೀಜಗಳನ್ನು ಹಾಕಿ ಅದನ್ನು ದೀಪ ಬೆಳಗುವ ಬತ್ತಿಯನ್ನಾಗಿ ಮಾಡಿ ತುಪ್ಪದಲ್ಲಿ ಅದ್ದಿ ದೀಪ ಹಚ್ಚಿ. ಅದು ಹೆಚ್ಚು ಹೊಗೆಯಾಡುವಾಗ ದೀಪವನ್ನು ಆರಿಸಿ ಆ ಹೊಗೆಯನ್ನು ಸೇವಿಸಿ ಇದರಿಂದ ತಲೆನೋವು ಬೇಗನೆ ನಿವಾರಣೆಯಾಗುತ್ತದೆ.